ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ಲೇಆಫ್ ಪ್ರವೇಶಿಸಲು ಆರ್ಸಿಬಿ ತಂಡಕ್ಕೆ ಇರುವುದು ಒಂದೇ ಚಾನ್ಸ್. ಆದರೆ, ಚೆನ್ನೈಗೆ ಮೂರು ಅವಕಾಶಗಳಿವೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಈ ನಿರ್ಣಾಯಕ ಪಂದ್ಯಕ್ಕೆ ಸಜ್ಜಾಗಿದೆ. ಇಂದಿನ ಪಂದ್ಯಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳಿಗೂ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ. ಇಂದು ಯಾವ ತಂಡ ಗೆಲ್ಲುತ್ತೋ ಅವರು ಪ್ಲೇಆಫ್ಗೆ ಅರ್ಹತೆ ಪಡೆಯಲಿದ್ದಾರೆ.
RCB ಪ್ಲೇಆಫ್ ತಲುಪಲು ಚೆನ್ನೈ ವಿರುದ್ಧ ಗೆಲ್ಲಲೇಬೇಕಿದೆ. ಅಲ್ಲದೆ, ಉತ್ತಮ ರನ್ರೇಟ್ನಲ್ಲಿ ಗೆಲುವು ದಾಖಲಿಸಬೇಕು. RCB ಮೊದಲು ಬ್ಯಾಟಿಂಗ್ ಮಾಡಿದರೆ ಬೃಹತ್ ಟಾರ್ಗೆಟ್ ನೀಡಿ, 18 ರನ್ನಿಂದ ಗೆಲ್ಲಬೇಕು. ಇಲ್ಲವಾದರೆ, ಚೆನ್ನೈ ನೀಡುವ ಗುರಿಯನ್ನು 18.1 ಓವರ್ನಲ್ಲಿ ಚೇಸ್ ಮಾಡಬೇಕು. ಹೀಗಾದರೆ, ಮಾತ್ರ RCB ಪ್ಲೇಆಫ್ಗೆ ಎಂಟ್ರಿ ಕೊಡಲಿದೆ.
ಆರ್ಸಿಬಿ ವಿರುದ್ಧ ಗೆದ್ದರೆ ಸಾಕು
ಇತ್ತ ಚೆನ್ನೈ ಪ್ಲೇಆಫ್ ಪ್ರವೇಶಕ್ಕೆ ಮೂರು ಚಾನ್ಸ್ಗಳಿವೆ. ಯಾವುದೇ ರೀತಿಯಲ್ಲಾದರೂ ಪ್ಲೇಆಫ್ಗೆ ತಲುಪಬಹುದು. CSKಗೆ ಯಾವುದೇ ರನ್ರೇಟ್ ಸಮಸ್ಯೆ ಇಲ್ಲ. ಇಂದು ಆರ್ಸಿಬಿ ವಿರುದ್ಧ ಗೆದ್ದರೆ ಸಾಕು. ಇದರ ಹೊರತಾಗಿಯೂ ಚೆನ್ನೈಗೆ ಎರಡು ಚಾನ್ಸ್ಗಳಿವೆ.
RCB ವಿರುದ್ಧ ಸೋತರೂ ಚಾನ್ಸ್
ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಚೆನ್ನೈಗೆ 1 ಅಂಕ ಸಿಗಲಿದೆ. ಇದರಿಂದಾಗಿ ಚೆನ್ನೈ 15 ಅಂಕ ಗಳೊಂದಿಗೆ ಸುಲಭವಾಗಿ ಪ್ಲೇಆಫ್ಗೆ ತಲುಪಲಿದೆ. ಇನ್ನೊಂದು ಅವಕಾಶ ಎಂದರೆ, ಆರ್ಸಿಬಿ ವಿರುದ್ಧ ಚೆನ್ನೈ ಸೋತರೂ ಕಡಿಮೆ ಅಂತರದಲ್ಲಿ ಸೋಲಬೇಕು.