Monday, October 7, 2024

ಅಪಘಾತದಲ್ಲಿ ಸಾವಿಗೀಡಾದ ನಟಿ ಪವಿತ್ರ ಜಯರಾಂ

ಆಂಧ್ರಪ್ರದೇಶ್​: ಕರ್ನಾಟಕ ಮೂಲದ ಕಿರುತೆರೆ ನಟಿ ಪವಿತ್ರಾ ಜಯರಾಂ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

ನಟಿ ಪವಿತ್ರಾ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಿಗ್ಗೆ ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿದೆ. ಭೀಕರ ಅಪಘಾತದಲ್ಲಿ ನಟಿ ಪವಿತ್ರಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪವಿತ್ರಾ ಜಯರಾಂ ಜೊತೆಗೆ ಕಾರಿನಲ್ಲಿ ಅವರ ಕುಟುಂಬಕ್ಕೆ ಸಂಬಂಧಿಸಿದವರು ಇದ್ದರು ಎನ್ನಲಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ.

ಇದನ್ನೂ ಓದಿ: ಅಪ್ರಾಪ್ತನಿಂದ ಅಚಾತುರ್ಯ: ಕಾರು ಅಪಘಾತದಲ್ಲಿ ಮಗು ಸಾವು

ಪವಿತ್ರಾ ಜಯರಾಂ ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು. ಕನ್ನಡದ ‘ರೋಬೋ ಫ್ಯಾಮಿಲಿ’ ಹಾಸ್ಯ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದ ಪವಿತ್ರಾ ಜಯರಾಂ ಅದಾದ ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ತೆಲುಗಿನ ಜನಪ್ರಿಯ ಧಾರಾವಾಹಿಯಲ್ಲಿಯೂ ಸಹ ಪವಿತ್ರಾ ನಟಿಸುತ್ತಿದ್ದರು. ಪವಿತ್ರಾ ಜಯರಂ ಕನ್ನಡ ಪ್ರೇಕ್ಷಕರಿಗೆ ಮಾತ್ರವಲ್ಲದೆ ತೆಲುಗು ಪ್ರೇಕ್ಷಕರಿಗೂ ಸಹ ಬಹಳ ಹತ್ತಿರವಾಗಿದ್ದರು.

RELATED ARTICLES

Related Articles

TRENDING ARTICLES