ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್ಡ್ರೈವ್ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಹೊರಬರುತ್ತಿದೆ. ಇದೀಗ ಪ್ರಜ್ವಲ್ ರೇವಣ್ಣ ವಿರುದ್ದ ಗನ್ ಪಾಯಿಂಟ್ನಲ್ಲಿ ಜೆಡಿಎಸ್ ನಾಯಕಿ ಮೇಲೆ ರೇಪ್ ಮಾಡಿದ್ದಾಗಿ ದೂರು ದಾಖಲಾಗಿದೆ. ಇದರೊಂದಿಗೆ ಪ್ರಜ್ವಲ್ ರೇವಣ್ಣ ಕಾಮಕಾಂಡಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ.
ಇದನ್ನೂ ಓದಿ: ರೇವಣ್ಣ ವಿರುದ್ದ ಸಂತ್ರಸ್ತೆಯ ಪುತ್ರ ದೂರು ದಾಖಲು: FIR ನಲ್ಲಿ ಏನಿದೆ?
ಜೆಡಿಎಸ್ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಮಹಿಳೆಯೊಬ್ಬರು ಕಾಮಾಸುರ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಈ ವಿಚಾರ ಬಾಯ್ಬಿಟ್ಟರೆ ನಿನ್ನ ಗಂಡನನ್ನ ಬಿಡೋದಿಲ್ಲ. ನಾನು ಕರೆದಾಗೆಲ್ಲಾ ಬರಬೇಕು ಅಂತ ಬೆದರಿಸಿದ್ದರು. ನಾನು ಕರೆದಾಗ ಬರದಿದ್ರೆ ವಿಡಿಯೋ ರಿಲೀಸ್ ಮಾಡ್ತೀನಿ ಅಂತಾ ಬೆದರಿಕೆ ಹಾಕುತ್ತಿದ್ದರು. ಗನ್ ಪಾಯಿಂಟ್ನಲ್ಲಿ ರೇಪ್ ಮಾಡಿ ವಿಡಿಯೋ ಶೂಟ್ ಮಾಡಿದ್ದಾರೆ. ಈ ಬಗ್ಗೆ ಜಿ.ಪಂ. ಮಾಜಿ ಸದಸ್ಯೆ ದೂರು ಕೊಟ್ಟಿದ್ದಾಳೆ. ಸದ್ಯ ಸಂತ್ರಸ್ತ ಮಹಿಳೆಯ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊಗಳ ಪೆನ್ಡ್ರೈವ್ ಸ್ಪೋಟಕ ಮಾಹಿತಿಯ ಸುದ್ದಿಯನ್ನು ಪವರ್ ಟಿವಿ ಪ್ರಸಾರ ಮಾಡಿತ್ತು, ಈ ವರದಿಯ ಬೆನ್ನಲ್ಲೇ ದೇಶಾದ್ಯಂತ ಬಾರಿ ಆಕ್ರೋಶ ವ್ಯಕ್ತವಾಗಿತ್ತು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ SIT ತಂಡವನ್ನು ರಚಿಸಿದೆ. ಇದೀಗ ಪ್ರಜ್ವಲ್ ಕಾಮಕಾಂಡದ ಅಕ್ರಮಗಳು ಬಗೆದಷ್ಟು ಬಯಲಿಗೆ ಬರುತ್ತಿದ್ದು ಸಂತ್ರಸ್ತರು ತಾವಾಗೆ ಬಂದು ಪ್ರಜ್ವಲ್ ರೇವಣ್ಣ ವಿರುದ್ದ ದೂರು ದಾಖಲಿಸುತ್ತಿದ್ದಾರೆ.