Monday, May 20, 2024

ಮಂಡ್ಯದ ಜನರೇ ನನಗೆ ಹೈಕಮಾಂಡ್​: ಸುಮಲತಾ ಅಂಬರೀಶ್​

ಬೆಂಗಳೂರು: ಮಂಡ್ಯದ ಜನರೇ ನನಗೆ ಹೈಕಮಾಂಡ್​ ಎಂದು ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಅಂಬರೀಶ್​ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಐದು ವರ್ಷ ಹಿಂದ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಜನರ ಸೇವೆ ಮಾಡಿದ್ದೆ.ಇಂದಿನಿಂದ ಹೊಸ ಅಧ್ಯಾಯ ಆರಂಭವಾಗುತ್ತಿದೆ.ನಾನು ಯಾವುದೇ ಒಳ್ಳೆ ಕಾರ್ಯ ಮಾಡುವಾಗ ಇಲ್ಲಿ ಬಂದು ಆಶೀರ್ವಾದ ಪಡೆಯುತ್ತೇನೆ. ಅವರ ಆಶೀರ್ವಾದ ನಮ್ಮ ಮೇಲೆ ಇದೆ ಎಂದರು.

ಬಿಜೆಪಿಯ ಎಲ್ಲ ರೀತಿಯ ಪಾರ್ಮಲಿಟಿಸ್ಟ್ ಪ್ರಕಾರ ಪಕ್ಷ ಸೇರ್ಪಡೆ ಇವತ್ತು ನಡೆಯುತ್ತೆ ಅದಾದ ಮೇಲೆ ಯಾವ ರೀತಿಯಲ್ಲಿ ಚುನಾವಣೆಗೆ ಕೆಲಸ ಮಾಡ್ಬೇಕು ಅಂತ ಚರ್ಚೆ ಮಾಡಿ ಎಲ್ಲೆಲ್ಲಿ ನನಗೆ ಪ್ರಚಾರಕ್ಕೆ ಹೋಗೋಕೆ ಹೇಳ್ತಾರೆ ಅಲ್ಲಿಲ್ಲ ನಾನು ಪ್ರಚಾರದಲ್ಲಿ ಭಾಗಿಯಾಗ್ತೀನಿ .ಇದು ಮಂಡ್ಯ ಎಲೆಕ್ಷನ್ ಅಲ್ಲ 28 ಕ್ಷೇತ್ರಗಳು ಗೆಲ್ಲಬೇಕು ಪಾರ್ಟಿ ಚೌಟ್ಟಿನಲ್ಲಿ ಎಲ್ಲರೂ ಕೂಡ ಕೆಲಸ ಮಾಡ್ಬೇಕು ನಾನು ಮಾಡ್ತೀನಿ ಎಂದರು.

ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗ್ಬೇಕು

ಇಡೀ ದೇಶದಲ್ಲೇ ನಡೆಯುತ್ತಿರುವ ಎಲೆಕ್ಷನ್ ನನ್ನ ಉದ್ದೇಶ ಮತ್ತೆ ಮೋದಿ ಆಗಬೇಕು.ಎನ್‌ಡಿಎ ಹೆಚ್ಚಿನ ಸೀಟು ಗೆಲ್ಬೇಕು.ಏಕಾಏಕಿ ಎಲ್ಲರೂ ಕನ್ವೀಸ್ ಆಗಲ್ಲ ಹಂತ ಹಂತವಾಗಿ ಎಲ್ಲರನ್ನೂ ಕರೆದುಕೊಂಡು ಬಿಜೆಪಿಗೆ ಬರ್ತೀನಿ ಅಭಿಷೇಕ್ ಬಿಜೆಪಿ ಸೇರ್ಪಡೆ ಆಗಲ್ಲ ನಾನು ಮಾತ್ರ ಆಗ್ತಾ ಇರೋದು ಎಂದರು.

ಮಂಡ್ಯ ಸಪೋರ್ಟರ್ಸ್ ಇದ್ದಾರೆ

ಮಂಡ್ಯ ಜಿಲ್ಲೆಯ ನನ್ನ ಬೆಂಬಲಿಗರೇ ನನ್ನ ಹೈಕಮಾಂಡ್ ಎಲ್ಲರೂ ಬಂದಿದ್ದಾರೆ.ಅಂಬರೀಷ್ ಜೊತೆ ಇದ್ದವರು ನನ್ನ ಜೊತೆ ಇದ್ದಾರೆ ಮುಂದೇನು ಇರ್ತಾರೆ.ಈ ಹಿಂದೆ ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸಿದ್ದೇನೆ.ಅಸೆಂಬ್ಲಿ ಎಲೆಕ್ಷನ್‌ನಲ್ಲೂ ಅವರ ಸಪೋರ್ಟಿಗೆ ನಿಂತಿದೆ.ಎಲ್ಲೂ ಕೂಡ ನನ್ನ ಡಬಲ್ ಸ್ಟ್ಯಾಂಡ್ ತಗೊಂಡಿಲ್ಲ.

ಸ್ಥಾನ ಮಾನ ನಿರಿಕ್ಷೇ ಇಟ್ಕೊಂಡು ನಾನು ಹೆಜ್ಜೆ ಹಾಕಲ್ಲ

ಬಿಜೆಪಿಯ ಸಂದೇಶ, ಕೆಲಸ, ಅಭಿವೃದ್ಧಿಯಿಂದ ನಾನು ಸೇರುತ್ತಿರುವುದು.ನಾನು ಆ ಪಕ್ಷ ಸೇರುದ್ರೆ ಮತ್ತಷ್ಟು ಕೆಲಸ ಮಾಡಬಹುದು.ಸ್ಥಾನ ಮಾನ ನಿರಿಕ್ಷೇ ಇಟ್ಕೊಂಡು ನಾನು ಹೆಜ್ಜೆ ಹಾಕಲ್ಲ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ ಆಗಿರುತ್ತೆ ಅದರಲ್ಲಿ ಎರಡು ಮಾತಿಲ್ಲ.ಅಂಬರೀಶ್ ಇದಿದ್ದರೆ ರಾಜಕೀಯಕ್ಕೆ ಬರೋ ಪ್ರಸಂಗನೇ ಇರ್ತಾ ಇರಲಿಲ್ಲ ಅವರು ನನ್ನ ನಿರ್ಧಾರ ಒಪ್ಕೋತ್ತಾರೆ ಎಂದರು.

 

RELATED ARTICLES

Related Articles

TRENDING ARTICLES