Monday, May 20, 2024

ಕಾಂಗ್ರೆಸ್ ಮತ್ತು ಪಾಕಿಸ್ತಾನ ಎರಡು ಒಂದೇ ಪರಿಸ್ಥಿತಿಯಲ್ಲಿವೆ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್ ಮತ್ತು ಪಾಕಿಸ್ತಾನ ಎರಡು ಒಂದೇ ಪರಿಸ್ಥಿತಿಯಲ್ಲಿವೆ. ಪಾಕಿಸ್ತಾನ ದಿವಾಳಿ ಆಗಿದ್ದರೆ, ದೇಶದಲ್ಲಿ ಕಾಂಗ್ರೆಸ್ ದಿವಾಳಿಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿರುವುದು ದೇಶ ಮತ್ತು ರಾಜ್ಯದ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆ ಕಾಂಗ್ರೆಸ್ ಮಾನಸಿಕತೆಯನ್ನು ತಿಳಿಸುತ್ತಿದೆ ಎಂದು ಟೀಕಿಸಿದರು.

ನಾಸೀರ್ ಹುಸೇನ್ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಪತ್ರಕರ್ತರ ಮೇಲೆ ದರ್ಪ ತೋರಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಒಂದು ವೇಳೆ ಗೆದ್ದರೆ, ಪಾಕಿಸ್ತಾನಕ್ಕೆ ರತ್ನಗಂಬಳಿ ಹಾಕುತ್ತಿರಾ..? ಪಾಕಿಸ್ತಾನ ಭಯೋತ್ಪಾದಕತೆಯಿಂದ ದೇಶದ ಜನರನ್ನು ಕೊಲೆ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದಾಗ ಇದನ್ನು ನಿಲ್ಲಿಸಿದ್ದೇವೆ ಎಂದು ಛೇಡಿಸಿದರು.

ನೀವು ಭಿಕ್ಷೆ ಬೇಡುವ ದುಸ್ಥಿಯಲ್ಲಿದ್ದೀರಿ

ಕಾಂಗ್ರೆಸ್ ತುಷ್ಟೀಕರಣ ಮತ್ತು ಮೂಲಭೂತವಾದ ಮನಸ್ಥಿತಿ ಹೊಂದಿದೆ. ಯಾರು ನಾಲಾಯಕ್ ಎಂದು ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಹಣೆ ಬರಹ ಏನು ಅಂತ ಗೊತ್ತಿದೆ. ಪಶ್ಚಿಮ ಬಂಗಾಳದಲ್ಲಿ ಭಿಕ್ಷೆ ಬೇಡಿ ಅವರು ಕೊಟ್ಟಷ್ಟು ಸೀಟು ತೆಗೆದುಕೊಳ್ಳುವ ಸ್ಥಿತಿಗೆ ಬಂದಿದ್ದೀರಿ. ನೀವು ಭಿಕ್ಷೆ ಬೇಡುವ ದುಸ್ಥಿಯಲ್ಲಿದ್ದೀರಿ. ನೀವು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ನಿರ್ಮಲಾ ಸ್ಪರ್ಧೆ ಬಗ್ಗೆ ನಿರ್ಧಾರ ಆಗಿಲ್ಲ

ಲೋಕಸಭಾ ಚುನಾವಣೆಯಲ್ಲಿ ಜೈ ಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಸ್ಪರ್ಧೆ ಬಗ್ಗೆ ಏನು ನಿರ್ಧಾರ ಆಗಿಲ್ಲ. ಆ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

RELATED ARTICLES

Related Articles

TRENDING ARTICLES