ಬೆಂಗಳೂರು : ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 17ನೇ ಆವೃತ್ತಿಯ ಐಪಿಎಲ್-2024 ವೇಳಾಪಟ್ಟಿ ಪ್ರಕಟವಾಗಿದೆ.
ಮಾರ್ಚ್ 22ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯದಿಂದ ಐಪಿಎಲ್ ಹಂಗಾಮ ಶುರುವಾಗಲಿದೆ.
ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬದ್ಧವೈರಿಗಳಾದ ಬೆಂಗಳೂರು (RCB) ಹಾಗೂ ಚೆನ್ನೈ (CSK) ಸೆಣಸಲಿವೆ. ಈ ಮೂಲಕ ಮೊದಲ ಪಂದ್ಯದಲ್ಲೇ ಐಪಿಎಲ್ ಕ್ರೇಜ್ ತಾರಕಕ್ಕೇರಲಿದೆ.
ಮೊದಲ ಸುತ್ತಿನ 21 ಪಂದ್ಯಗಳಲ್ಲಿ ಆರ್ಸಿಬಿ ಮಾತ್ರ 5 ಪಂದ್ಯಗಳನ್ನು ಆಡುವ ಏಕೈಕ ತಂಡವಾಗಿದೆ. ಈ ಪೈಕಿ ಆರ್ಸಿಬಿ ಬೆಂಗಳೂರಿನಲ್ಲಿ 3 ಪಂದ್ಯ ಆಡಲಿದೆ. ಇನ್ನೂ ಚೆನ್ನೈ ಹಾಗೂ ಆರ್ಸಿಬಿ ತಂಡಗಳು ಈವರೆಗೆ 30 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 20 ಬಾರಿ ಗೆಲುವಿನ ನಗೆ ಬೀರಿದ್ದರೆ, ಆರ್ಸಿಬಿ 10 ಬಾರಿ ಗೆಲುವು ಸಾಧಿಸಿದೆ.
ಆರ್ಸಿಬಿಯ ಮೊದಲ 5 ಪಂದ್ಯಗಳು
- ಮಾರ್ಚ್ 22 : ಆರ್ಸಿಬಿ vs ಚೆನ್ನೈ, ಚೆನ್ನೈ
- ಮಾರ್ಚ್ 25 : ಆರ್ಸಿಬಿ vs ಪಂಜಾಬ್, ಬೆಂಗಳೂರು
- ಮಾರ್ಚ್ 29 : ಆರ್ಸಿಬಿ vs ಕೆಕೆಆರ್, ಬೆಂಗಳೂರು
- ಏಪ್ರಿಲ್ 2 : ಆರ್ಸಿಬಿ vs ಎಲ್ಎಸ್ಜಿ, ಬೆಂಗಳೂರು
- ಏಪ್ರಿಲ್ 6 : ಆರ್ಸಿಬಿ vs ಆರ್ಆರ್, ಜೈಪುರ