ಬೆಂಗಳೂರು : ಲೋಕಸಭಾ ಚುನಾವಣೆಗೂ ಮುಂಚೆಯೇ ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರಿಗೆ ಪಂಜಾಬ್ ಚುನಾವಣಾ ಆಯೋಗವು ಬಹುದೊಡ್ಡ ಜವಾಬ್ದಾರಿಯನ್ನು ನೀಡಿದೆ.
ಪಂಜಾಬ್ ಮುಖ್ಯ ಚುನಾವಣಾಧಿಕಾರಿಗಳಾದ ಸಿಬಿನ್ ಸಿ ಅವರು, ಶುಭ್ಮನ್ ಗಿಲ್ ಅವರನ್ನು ಪಂಜಾಬ್ ರಾಜ್ಯ ಚುನಾವಣಾ ಐಕಾನ್ ಆಗಿ ಆಯ್ಕೆ ಮಾಡಿದ್ದಾರೆ.
ಗಿಲ್ ಅವರು ಚುನಾವಣೆಗೂ ಮುಂಚಿತವಾಗಿ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಈ ಬಾರಿ ಪಂಜಾಬ್ ರಾಜ್ಯದಲ್ಲಿ ಶೇ.70ರಷ್ಟು ಮತದಾನ ದಾಟುವಂತೆ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಇತಿಹಾಸ ಸೃಷ್ಟಿ..! ಭಾರತಕ್ಕೆ ಅತಿದೊಡ್ಡ ಗೆಲುವು, ಇಂಗ್ಲೆಂಡ್ಗೆ 2ನೇ ಅತಿದೊಡ್ಡ ಸೋಲು
ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ
ಗಿಲ್ ಪ್ರತಿಭಾವಂತ ಯುವ ಕ್ರಿಕೆಟಿಗ. ಅವರು ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿಲಿದ್ದಾರೆ. ಇದು ಪ್ರತಿಯೊಬ್ಬರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತದೆ. ಈ ಹಿಂದೆ, ಖ್ಯಾತ ಪಂಜಾಬಿ ಗಾಯಕ ತಾರ್ಸೆಮ್ ಜಸ್ಸರ್ ಅವರನ್ನು ರಾಜ್ಯ ಚುನಾವಣಾ ಐಕಾನ್ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಆ ಜವಬ್ದಾರಿಯನ್ನು ಗಿಲ್ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.