ರಾಜಸ್ಥಾನ: ರಾಜಸ್ಥಾನದಿಂದ ರಾಜ್ಯಸಭೆಗೆ ನಾಮನಿರ್ದೇಶನ ಬಯಸಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ರಾಜಸ್ಥಾನಕ್ಕೆ ಪ್ರಯಾಣ ಆರಂಭಿಸಿದ್ದಾರೆ.
ಆರೋಗ್ಯ ಕಾರಣದಿಂದಾಗಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದು, ರಾಜ್ಯಸಭೆಗೆ ಆಯ್ಕೆ ಬಯಸಿದ್ದಾರೆ. ಉತ್ತರಪ್ರದೇಶದ ರಾಯ್ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋನಿಯಾ ಅವರು ಇದೇ ಮೊದಲ ಬಾರಿಗೆ ಸಂಸತ್ತಿನ ಮೇಲ್ಮನೆಗೆ ಅಡಿ ಇಡಲು ಮುಂದಾಗಿದ್ದಾರೆ. ಹೀಗಾಗಿ ಅವರು ವಸಂತ ಪಂಚಮಿಯ ಶುಭದಿನವಾದ ಇಂದೇ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದು, ದೆಹಲಿಯ ತಮ್ಮ ನಿವಾಸದಿಂದ ಕೆಲ ನಾಯಕರ ಜೊತೆಗೆ ರಾಜಸ್ಥಾನಕ್ಕೆ ಹೊರಟಿದ್ದಾರೆ.
ಇದನ್ನೂ ಓದಿ: ರಾಕ್ ಲೈನ್ ಮಾಲ್ ಗೆ ಬೀಗ ಜಡಿದ ಅಧಿಕಾರಿಗಳು!
ದೆಹಲಿಯಿಂದ ಎರಡು ಚಾರ್ಟರ್ ವಿಮಾನಗಳ ಮೂಲಕ ಎಲ್ಲ ನಾಯಕರು ಜೈಪುರ ತಲುಪಲಿದ್ದು, ವಿಮಾನ ನಿಲ್ದಾಣದಿಂದ ವಿಧಾನಸಭೆಗೆ ತೆರಳಲಿದ್ದಾರೆ. ಬಳಿಕ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬೆಳಗ್ಗೆ 11.30 ಕ್ಕೆ ವಿಧಾನಸಭೆಗೆ ತೆರಳಿ ರಾಜ್ಯಸಭೆಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ ಮತ್ತು ವಿರೋಧ ಪಕ್ಷದ ನಾಯಕ ಟಿಕಾರಾಂ ಜೂಲಿ ಅವರು ಸಾಕ್ಷಿಯಾಗಲಿದ್ದಾರೆ.
#WATCH | Congress Parliamentary Party chairperson Sonia Gandhi leaves from her residence. She will file her nomination for Rajya Sabha in Jaipur, Rajasthan today. pic.twitter.com/ZM5h1uWpls
— ANI (@ANI) February 14, 2024