Monday, January 20, 2025

ಪುತ್ರನಿಗೆ ಟಿಕೆಟ್ ಸಿಕ್ಕರೆ, ಗೆಲ್ಲಿಸಿಕೊಂಡು ಬರ್ತೇನೆ : ಈಶ್ವರಪ್ಪ

ಮೈಸೂರು : ನನ್ನ ಮಗ ಹೋಡಾಟ ಮಾಡುತ್ತಿದ್ದಾನೆ. ಟಿಕೆಟ್ ಸಿಕ್ಕರೆ ಸಂತೋಷ, ಗೆಲ್ಲುತ್ತಾನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಗನಿಗೆ ಟಿಕೆಟ್ ಸಿಕ್ಕರೆ ಎಲ್ಲರೂ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆ. ಟಿಕೆಟ್ ಕೊಡುವ ವಿಶ್ವಾಸ ಇದೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ವೈಯಕ್ತಿಕ ಪ್ರಶ್ನೆ ಬರಲ್ಲ. ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕುರಿತು ಚರ್ಚೆ ಆಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಇಲ್ಲಿ ಬಂದು ಸಭೆ ಮಾಡುತ್ತಿದ್ದಾರೆ. 28ಕ್ಕೆ 28 ಕ್ಷೇತ್ರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಗೆದ್ದೇ ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ಶಾ ರಾಜ್ಯಕ್ಕೆ ಬಂದೊರೋದು ಸಂತೋಷ

ಅಮಿತ್ ಶಾ ಮೈಸೂರಿಗೆ ಬಂದೊರೋದು ಸಂತೋಷ. ಲೋಕಸಭಾ ಚುನಾವಣೆಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ. ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಸಲಹೆ ನೀಡಲಿದ್ದಾರೆ. ಚುನಾವಣೆ ರೂಪುರೇಷೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಮುಸಲ್ಮಾನ ಪರ ಇದೆ

ಜ್ಞಾನವ್ಯಾಪಿ ಮಸೀದಿಗಾಗಿ ಬಲಿದಾನಕ್ಕೆ ಸಿದ್ದ ಎಂಬ ಎಸ್​ಡಿಪಿಐನ ಅಬ್ದುಲ್ ಮಜೀದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಕೋರ್ಟ್ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ಎಸ್​ಡಿಪಿಐ ಲೀಡರ್ ಅರೆಸ್ಟ್ ಮಾಡಬೇಕಿತ್ತು. ರಾಜ್ಯ ಸರ್ಕಾರ ಮುಸಲ್ಮಾನ ಪರ ಇದೆ ಎನ್ನುವುದನ್ನು ತೋರಿಸಿದ್ದಾರೆ. ಕಾನೂನು ಉಲ್ಲಂಘನೆ ಮಾಡ್ತಿರೋ ವ್ಯಕ್ತಿಗಳಿಗೆ ಸರ್ಕಾರ ಬೆಂಬಲ ಕೊಡ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES