ಬೆಂಗಳೂರು: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಯ ಪ್ರೋಮೋವೊಂದರಲ್ಲಿ ದೈವದಂತೆ ವೇಷ ಭೂಷಣ ಧರಿಸಿ ನಟನೆ ಮಾಡಿರುವುದಕ್ಕಾಗಿ ದೈವಾರಾಧಕರು ಪೊಲೀಸರು ಠಾಣೆ ಮಾಡಿದ್ದಾರೆ.
ಹೌದು, ಖಾಸಗಿ ಚಾನೆಲ್ನ ಧಾರಾವಾಹಿಗೆ ಇದೀಗ ಸಂಕಷ್ಟ ಎದುರಾಗಿದೆ. ಧಾರಾವಾಹಿಯಲ್ಲಿ ದೈವಾರಾಧನೆಯ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಧಾರವಾಹಿ ತಂಡದ ವಿರುದ್ಧ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಸ್ಥೆಯಿಂದ ಪೊಲೀಸ್ ದೂರು ನೀಡಲಾಗಿದೆ. ದೈವದ ಪಾತ್ರ ಮಾಡಿದ ಪ್ರಶಾಂತ್ ಸಿಕೆ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ.
ದೈವಾರಾಧನೆಯ ಚಿತ್ರೀಕರಣ ಮಾಡಿದ್ದು ಅದನ್ನು ಪ್ರಸಾರ ಮಾಡದಂತೆ ತಡೆಯುವಂತೆ ಮನವಿ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಮತ್ತು ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ.
ದೈವಾರಾಧನೆಗೆ ಅಪಮಾನ
ದೈವದ ವೇಷಭೂಷಣ ತೊಟ್ಟು ದೈವಾರಾಧನೆಗೆ ಅಪಮಾನ ಮಾಡಲಾಗಿದೆ. ಛದ್ಮವೇಷದಂತೆ ದೈವದ ವೇಷ ತೊಟ್ಟು ಅಪಾರ ಜನ ನಂಬಿಕೆಗೆ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಲಾಗಿದೆ. ದೈವಾರಾಧನೆ ಮಾಡುವ ಸಮುದಾಯದವರಿಗೂ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಧಾರ್ಮಿಕ ನಂಬಿಕೆಗಳನ್ನು ಘಾಸಿ ಮಾಡಿದ ಧಾರಾವಾಹಿ ತಂಡದ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಕಾಂತಾರ-2 ಸಿನಿಮಾದಲ್ಲಿ ದೈವರಾಧಾನೆ ಬೇಡ
ಕಾಂತಾರ ಸಿನಿಮಾ ಬಂದ ಮೇಲಂತೂ ದೈವಾರಾಧನೆಯನ್ನು ತುಂಬಾ ಹೆಚ್ಚಾಗಿ ಇಮಿಟೇಟ್ ಮಾಡಲಾಗುತ್ತಿದೆ. ವೇಷವನ್ನು ಧರಿಸಿ, ಫೋಟೋಗಳನ್ನು ಶೇರ್ ಮಾಡುತ್ತಾ, ಅಲ್ಲಲ್ಲಿ ಆರಾಧನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.