Sunday, December 22, 2024

ಕರಿಮಣಿ ಮಾಲೀಕ ಅವ‘ನಲ್ಲ’!

ಬೆಳಗಾವಿ: ಕಟ್ಟಿಕೊಂಡ ಗಂಡನನ್ನು ಬಿಟ್ಟು ವಿವಾಹವಾಗಿದ್ದ ಪರಪುರುಷರೊಂದಿಗೆ ಮಹಿಳೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನರಾಳದಲ್ಲಿ ನಡೆದಿದೆ.

ರೇಣುಕಾ ವಾಲಿಕರ ಮತ್ತು ಲಗಮ ವಾಲಿಕರ ಪರಾರಿಯಾಗಿರುವ ಜೋಡಿ, ಲಗಮಾ ವಾಲಿಕರನ ಜೊತೆ ಓಡಿಹೋದ ರೇಣುಕಾ ವಾಲಿಕರ ಕುಟುಂಬದವರು ಲಗಮಾ ವಾಲಿಕರನ ಮನೆಯ ಮೇಲೆ ದಾಳಿ ಮಾಡಿ ಇಡೀ ಮನೆಯನ್ನೇ ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರೇಮಿಗಳ ದಿನ ಫೆಬ್ರವರಿ 14 ರಿಂದ 17 ರವರೆಗೆ ಮದ್ಯ ಮಾರಾಟ ನಿಷೇಧ!

ಕಳೆದ 10 ವರ್ಷಗಳ ಹಿಂದೆ ರೇಣುಕಾ ಮದುವೆಯಾಗಿತ್ತು ಇಬ್ಬರು ಮಕ್ಕಳು ಇದ್ದರು, ಇತ್ತ ಲಗಮಾ ವಾಲಿಕರನಿಗೂ ಮದುವೆಯಾಗಿ ಒಬ್ಬ ಮಗ ಇದ್ದ. ಆದರೇ ಈ ಇಬ್ಬರು ಅಕ್ರಮ ಸಂಬಂಧವನ್ನು ಹೊಂದಿದ್ದರು. ಅತ್ತ ಹೆಂಡತಿಯನ್ನು ಬಿಟ್ಟು ಲಗಮಾ, ರೇಣುಕಾಳನ್ನು ಕರೆದುಕೊಂಡು ಓಡಿಹೋಗಿದ್ದಾನೆ. ಈ ಘಟನೆಯಿಂದ ಆಕ್ರೋಶಗೊಂಡ ರೇಣುಕಾ ಮನೆಯ ಸಂಬಂಧಿಗಳು ಸುಮಾರು 30ಕ್ಕೂ ಹೆಚ್ಚು ಮಂದಿ ಕೈಲಿ ದೊಣ್ಣೆ, ಕುಡುಗೋಲು ಹಿಡಿದು ಲಗಮನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಕಿಟಕಿ, ಬಾಗಿಲು ಮನೆಯ ಹೆಂಚುಗಳನ್ನೆಲ್ಲಾ ಪುಡಿ ಪುಡಿ ಮಾಡಿ ಮನೆಯ ಸಾಮಾನುಗಳನ್ನು ಹೊರಹಾಕಿದ್ದಾರೆ.

ತಮ್ಮ ಮನೆಯ ಮೇಲೆ ದಾಳಿ ಮಾಡಲು ಜನ ಬರುತ್ತಿರುವ ವಿಚಾರ ತಿಳಿದ ಲಗುಮನ  ತಾಯಿ ಹಾಗು ಪತ್ನಿ ಪಕ್ಕದ ಮನೆಯಲ್ಲಿ ಅಡಗಿಕುಳಿತು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ತಮ್ಮ ಮಗ ಮಾಡಿದ ತಪ್ಪಿಗೆ ಲಗಮನ ತಾಯಿ, ಹೆಂಡತಿ ಹಾಗು ಮಗ ಬೀದಿಗೆ ಬಂದಂತಾಗಿದೆ. ಈ ಘಟನೆಯು ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES