ವಿಂಡ್‌ಹೋಕ್ : ನಮೀಬಿಯಾದ ಅಧ್ಯಕ್ಷರಾದ ಹಾಗೇ ಗೇನ್‌ಗೋಬ್ (82) ಅವರು ಕ್ಯಾನ್ಸ್ರ್ನಿಂದ ಭಾನುವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು.
ಇದನ್ನೂ ಓದಿ: ದೇಶ ವಿಭಜನೆ ಹೇಳಿಕೆ: ಸಂಸದ ಡಿಕೆ ಸುರೇಶ್ ನಿವಾಸದ ಎದುರು ಬಿಜೆಪಿ ಪ್ರತಿಭಟನೆ!
ಅನಾರೋಗ್ಯದಿಂದ ಬಳಲುತ್ತಿದ್ದ ಗೇನ್‌ಗೋಬ್ ಅವರನ್ನು ವಿಂಡ್‌ಹೋಕ್ ಲೇಡಿ ಪೊಹಂಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಕ್ಯಾನ್ಸರ್ ಪತ್ತೆಯಾಗಿದ್ದು, ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು.
ಗೇನ್‌ಗೋಬ್ ನಿಧನರಾದ ಸುದ್ದಿಯನ್ನು ನಮೀಬಿಯಾ ಅಧ್ಯಕ್ಷರ ಕಚೇರಿ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಧೃಡಪಡಿಸಿದ್ದು, ಸಾವಿಗೆ ನಿಖರ ಕಾರಣವನ್ನು ಅದು ತಿಳಿಸಿಲ್ಲ. ಆದರೆ ಕ್ಯಾನ್ಸರ್ ಚಿಕಿತ್ಸೆಗೆ ಅಧ್ಯಕ್ಷರು ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ಈ ಹಿಂದೆ ತಿಳಿಸಿತ್ತು.
2014ರಲ್ಲಿ ಪ್ರಧಾನಿಯಾಗಿದ್ದ ವೇಳೆ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. 2015ರಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈ ವರ್ಷದ ಕೊನೆಯಲ್ಲಿ ನಮೀಬಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
Announcement of the Passing of H.E Dr @hagegeingob, President of the Republic of Namibia, 04 February 2024
Fellow Namibians,
It is with utmost sadness and regret that I inform you that our beloved Dr. Hage G. Geingob, the President of the Republic of Namibia has passed on… pic.twitter.com/Qb2t6M5nHi
— Namibian Presidency (@NamPresidency) February 4, 2024