ಬೆಂಗಳೂರು: ಭಾರತೀಯ ಮಹಿಳೆಯರನ್ನು ಅತಿ ಹೆಚ್ಚಾಗಿ ಕಾಡುತ್ತಿರುವ ಕ್ಯಾನ್ಸರ್‌ನಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು.ಇದರಿಂದ ಸಾಯುವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹಾಗಿದ್ರೆ ಗರ್ಭಕಂಠದ ಕ್ಯಾನ್ಸರ್ ಹೇಗೆ ಬರುತ್ತದೆ ಇದಕ್ಕೆ ಕಾರಣ ಮತ್ತುಲಕ್ಷಣಗಳೇನು.? ಇಲ್ಲಿದೆ ಸಂಪೂರ್ಣ ಮಾಗಿತಿ
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳು
- ಲೈಂಗಿಕ ಸಂಪರ್ಕ ಮಾಡಿದಾಗ ಜನನೇಂದ್ರೀಯದಲ್ಲಿ ರಕ್ತಸ್ರಾವ.
- ಮುಟ್ಟಿನ ಅವಧಿಯ ಮುನ್ನವೇ ರಕ್ತಸ್ರಾವವಾಗುತ್ತದೆ.
- ಬಿಳುಪು ಹೋಗುವುದು ಹಾಗೂ ದುರ್ವಾಸನೆ ಕೂಡ ಬರಬಹುದು.
- ಲೈಂಗಿಕ ಸಂಪರ್ಕದ ಸಮಯದಲ್ಲಿ ಕಾಡುವ ನೋವು ಯಾರಿಗೆ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚು
- ಧೂಮಪಾನ ಮಾಡುವುದರಿಂದ ಗರ್ಭಕಂಠದ ಕ್ಯಾನ್ಸರ್ ಸಾಧ್ಯತೆ ಹೆಚ್ಚಾಗಿರುತ್ತದೆ.
- ಒಂದಕ್ಕಿಂತ ಹೆಚ್ಚಿನ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕವಿರುವರಿಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಬರಬಹುದು.
- ಚಿಕ್ಕ ಪ್ರಾಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿದ್ದರೆ HPV ಬರುವ ಸಾಧ್ಯತೆ ಇದೆ.
- ಲೈಂಗಿಕ ಸೋಂಕಿನಿಂದ ಕೂಡ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗುವುದು.
- ಹರ್ಪೀಸ್, ಕ್ಲಮೈಡಿಯ, ಗೊನೊರಿಯಾ, ಸಿಫಿಲಿಸ್ ಮತ್ತು ಎಚ್ಐವಿ ಈ ಬಗೆಯ ಸೋಂಕುಗಳಿಂದಲೂ ಬರುವುದು.
- ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ಈ ಬಗೆಯ ಸೋಂಕು ಹರಡುವುದು.
- ಗರ್ಭಪಾತ ತಡೆಗಟ್ಟಲು ಔಷಧ ತೆಗೆದುಕೊಳ್ಳುತ್ತಿದ್ದರೆ ನಿಮ್ಮ ತಾಯಿ DES ಎಂಬ ಔಷಧಿ ಗರ್ಭಾವಸ್ಥೆಯಲ್ಲಿ ತೆಗೆದುಕೊಂಡಿದ್ದರೆ ಇದರಿಂದ ಕೂಡ ಗರ್ಭಕಂಠದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ.
ಗರ್ಭಕಂಠದ ಕ್ಯಾನ್ಸರ್ ವಿಧಗಳು
ಕ್ಯಾನ್ಸರ್ ಪ್ರಾರಂಭವಾದ ಜೀವಕೋಶದ ಪ್ರಕಾರವನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಹೆಸರಿಸಲಾಗುತ್ತದೆ. ಎರಡು ಮುಖ್ಯ ವಿಧಗಳು
ಸ್ಕ್ಯಾಮಸ್ ಸೆಲ್ ಕಾರ್ಸಿನೋಮ: ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು (ಶೇ.90ರ ವರೆಗೆ) ಸ್ಕ್ಯಾಮಸ್ ಸೆಲ್ ಕಾರ್ಸಿನೋಮಗಳಾಗಿವೆ. ಈ ಕ್ಯಾನ್ಸರ್‌ಗಳು ಎಕ್ಟೋಸರ್ವಿಕ್ಸ್‌ನಲ್ಲಿರುವ ಜೀವಕೋಶಗಳಿಂದ ಬೆಳವಣಿಗೆಯಾಗುತ್ತವೆ.
ಅಡಿನೊಕಾರ್ಸಿನೋಮ: ಗರ್ಭಕಂಠದ ಅಡಿನೊಕಾರ್ಸಿನೋಮಗಳು ಎಂಡೋ ಸರ್ವಿಕ್ಸ್‌ನ ಗ್ರಂಥಿ ಕೋಶಗಳಲ್ಲಿ ಬೆಳವಣಿಗೆಯಾಗುತ್ತವೆ. ಕೆಲವೊಮ್ಮೆ ಗರ್ಭಕಂಠದ ಕ್ಯಾನ್ಸರ್ ಸ್ಕ್ಯಾಮಸ್ ಸೆಲ್ ಕಾರ್ಸಿನೋಮ ಮತ್ತು ಅಡಿನೊಕಾರ್ಸಿನೋಮ ಎರಡರ ಲಕ್ಷಣಗಳನ್ನು ಹೊಂದಿರುತ್ತದೆ. ಇದನ್ನು ಮಿಶ್ರ =ಕಾರ್ಸಿನೋಮ ಅಥವಾ ಅಡೆನೊಸ್ಟಾಮಸ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಬಹಳ ವಿರಳವಾಗಿ, ಗರ್ಭಕಂಠದ ಇತರ ಜೀವಕೋಶಗಳಲ್ಲಿ ಕ್ಯಾನ್ಸರ್ ಬೆಳವಣಿಗೆಯಾಗುತ್ತದೆ.