Thursday, January 23, 2025

ಪ್ರಯಾಣಿಕರ ಹುಚ್ಚಾಟ.. ಸೆಲ್ಫಿ ಕ್ಲಿಕ್ಕಿಸಲು ಬಂದವರನ್ನ ಅಟ್ಟಾಡಿಸಿದ ಒಂಟಿ ಸಲಗ

ಚಾಮರಾಜನಗರ : ಕಾಡಾನೆ ಜೊತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟಕ್ಕೆ ಮುಂದಾದ ವ್ಯಕ್ತಿಗಳು ಅಪಾಯಕ್ಕೆ ಸಿಲುಕಿ ಕೂಗಳತೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗಡಿ ಭಾಗದ ಕೇರಳದ ಬಂಡೀಪುರ ಸುಲ್ತಾನ್‌ ಬತ್ತೇರಿ ರಸ್ತೆಯಲ್ಲಿರುವ ಮುತ್ತಂಗ ಚೆಕ್‌ಪೋಸ್ಟ್‌ ಬಳಿ ಈ ಘಟನೆ ನಡೆದಿದೆ.

ಮುತ್ತಂಗ ಚಕ್​ ಪೋಸ್ಟ್ ಬಳಿ ಕಾಡಾನೆ ರಸ್ತೆ ಬದಿಯಲ್ಲಿ ತನ್ನಪಾಡಿಗೆ ಸಾಗುತ್ತಿತ್ತು. ಅದೇ ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಹುಚ್ಚಾಟವಾಡಿದ್ದಾರೆ. ಬಂಡೀಪುರದಲ್ಲಿ ಕೇರಳಕ್ಕೆ ತೆರಳುತ್ತಿದ್ದ ಇಬ್ಬರು ಪ್ರಯಾಣಿಕರು ಆನೆ ಕಂಡು ಫೋಟೋ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಒಂಟಿ ಸಲಗ ಇಬ್ಬರನ್ನೂ ಅಟ್ಟಾಡಿಸಿಕೊಂಡು ಬಂದಿದೆ.

ಕಾಲಿನಿಂದ ತುಳಿದು ಸಾಯಿಸಲು ಯತ್ನ

ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿರುವಾಗ ಒಬ್ಬ ಎಡವಿ ಬಿದ್ದಿದ್ದಾನೆ. ಕೆಳಗೆ ಬಿದ್ದ ಪ್ರಯಾಣಿಕನ ಮೇಲೆ ಕಾಡಾನೆ ಹಿಂಗಾಲಿನಿಂದ ಒದ್ದು ದಾಳಿಗೆ ಮುಂದಾಗಿದೆ. ಅಲ್ಲದೆ, ಕಾಲಿನಿಂದ ತುಳಿದು ಸಾಯಿಸಲು ಯತ್ನಿಸಿದೆ. ಅದೃಷ್ಟವಶಾತ್ ಆತ ತೆವಳಿಕೊಂಡು ಆನೆಯ ಕಾಲಿನಿಂದ ತಪ್ಪಿಸಿಕೊಂಡಿದ್ದಾರೆ. ಕಾಡಾನೆ ಅಟ್ಟಾಡಿಸಿದ ದೃಶ್ಯ ಬೆಚ್ಚಿಬೀಳಿಸುವಂತಿದೆ.

ಬಂಡೀಪುರದ ರಸ್ತೆಯಲ್ಲಿ ಪ್ರಯಾಣಿಕರ ಮೇಲೆ ಕಾಡಾನೆ ದಾಳಿ ಮಾಡುತ್ತಿರುವ ದೃಶ್ಯ

RELATED ARTICLES

Related Articles

TRENDING ARTICLES