Thursday, December 19, 2024

ಪ್ರತಾಪ್ ವಿರುದ್ದ ಬಿತ್ತು ಕೇಸ್ : ಏನಿದು ಮತ್ತೊಂದು ಅವಾಂತರ?

ಬೆಂಗಳೂರು : ಸದಾ ಒಂದಲ್ಲಾ ಒಂದು ವಿವಾದಕ್ಕೆ ಸಿಲುಕಿಕೊಳ್ಳುವ ಬಿಗ್ ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ವಿರುದ್ದ ಮತ್ತೊಂದು ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಆತನ ಸಂಸ್ಥೆ ವಿರುದ್ದ ದೂರು ಸಹ ದಾಖಲಾಗಿದೆ.

ಡ್ರೋಣ್ ಪ್ರತಾಪ್ ಎಂದೇ ಹೆಸರುವಾಸಿಯಾಗಿರೋ ಬಿಗ್ ಬಾಸ್ ಸ್ಪರ್ಧಿ ಪ್ರತಾಪ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ಎರಡನೇ ದೂರು ಇದಾಗಿದೆ.

ಈ ಹಿಂದೆ ಪ್ರಯಾಗ್ ಎಂಬ ಪಶುವೈದ್ಯಾಧಿಕಾರಿ ಎಂಬುವರು ಪ್ರತಾಪ್ ಅಂಡ್ ಗ್ಯಾಂಗ್ ರೈತರಿಗೆ ವಂಚನೆ ಮಾಡ್ತಿದ್ದಾರೆ.‌ಅದರ ಬಗ್ಗೆ ಉನ್ನತ ತನಿಖೆ ಆಗ್ಬೇಕು ಅಂತ ದೂರಿನಲ್ಲಿ ಮನವಿ ಮಾಡಿದ್ರು. ಆದ್ರೆ, ಹೀಗ ಬನಶಂಕರಿ ನಿವಾಸಿಯಾದ ಯೂಟ್ಯೂಬರ್ ಕಂ ಇಂಜಿನಿಯರ್ ಪರಮೇಶ್ ಎಂಬುವರು ಡ್ರೋನ್ ಪ್ರತಾಪ್ ಅವ್ರು ನಡೆಸುತ್ತಿರೋ ಸ್ಟಾರ್ಟ್ ಅಪ್ ಕಂಪನಿ ಡ್ರೋನಾರ್ಕ್ ಏರೋಸ್ಪೇಸ್ ಪ್ರೈ ಲಿ. ಕಂಪನಿ ಪರವಾನಗಿ ಪಡೆದಿಲ್ಲ.

ಅನುಮತಿ ಪಡೆಯದೇ ಡ್ರೋನ್ ಮಾರಾಟ

ಕೇಂದ್ರ ಸರ್ಕಾರದ ಡಿಜಿಸಿಎ ಅನುಮತಿ ಪಡೆಯದೇ ಡ್ರೋನ್ ಗಳನ್ನ ರೈತರಿಗೆ ಡ್ರೋನ್ ಗಳನ್ನ ಮಾರಾಟ ಮಾಡ್ತಿದ್ದಾರೆ. ಇದರಿಂದ ಡ್ರೋಣ್ ಪ್ರತಾಪ್ ಅಂಡ್ ಗ್ಯಾಂಗ್ ಹಣ ಮಾಡಲು ಕಾನೂನು ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಡ್ರೋನಾರ್ಕ್ ಏರೋಸ್ಪೇಸ್ ಸಂಸ್ಥೆಯ ಸಿಬ್ಬಂದಿ ರೈತರನ್ನ ಹೇಗೆ ಸಂಪರ್ಕಿಸ್ತಾರೆ. ಅವ್ರ ಕ್ವಾಟೇಷನ್. ಬಳಿಕ ಗ್ಯಾರಂಟಿ ಯಾವ ರೀತಿ ನೀಡ್ತಾರೆ ಎಂಬ ಬಗ್ಗೆ ನಡೆಸಿರುವ ಆಡಿಯೋ ಸಂಭಾಷಣೆ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ತನಿಖೆ ಬಳಿಕ ಸತ್ಯಾಸತ್ಯತೆ ಬೆಳಕಿಗೆ

ಸದ್ಯ ಯೂಟ್ಯೂರ್ ಕಂ ಇಂಜಿನಿಯರ್ ಆದ ಪರಮೇಶ್ ನೀಡಿರುವ ದೂರನ್ನ ಸ್ವೀಕರಿಸಿರೋ ರಾಜರಾಜೇಶ್ವರಿನಗರ ಪೊಲೀಸರು ಎನ್​ಸಿಆರ್ ದಾಖಲಿಸಿಕೊಂಡಿದ್ದಾರೆ. ಇನ್ನು ವಾರದ ಅಂತರದಲ್ಲಿ ಒಂದೇ ಠಾಣೆಯಲ್ಲಿ ದಾಖಲಾಗಿರೋ ಎರಡು ದೂರು ದಾಖಲಾಗಿದ್ದು, ಪೊಲೀಸರು ಡ್ರೋಣ್ ಪ್ರತಾಪ್ ಅನ್ನ ಕರೆಸಿ ವಿಚಾರಣೆ ನಡೆಸಲು ಸಿದ್ದತೆ ನಡೆಸ್ತಿದ್ದಾರೆ. ತನಿಖೆಯಲ್ಲಿ ದೂರಿಗೆ ಸಂಬಂಧಿಸಿದ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

RELATED ARTICLES

Related Articles

TRENDING ARTICLES