ಬೆಂಗಳೂರು : Paytm ಪೇಮೆಂಟ್ಸ್ ಬ್ಯಾಂಕ್ಗೆ ಆರ್‌ಬಿಐ ಶಾಕ್ ನೀಡಿದೆ. ಹೊಸ ಗ್ರಾಹಕರನ್ನು ದಾಖಲು ಮಾಡಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆದೇಶಿಸಿದೆ.
ಫೆಬ್ರವರಿ 29ರ ನಂತರ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್, ವ್ಯಾಲೆಟ್ ಮತ್ತು ಫಾಸ್ಟ್‌ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್‌ಗೆ ಆರ್‌ಬಿಐ ನಿರ್ಬಂಧಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ರಿಸರ್ವ್ ಬ್ಯಾಂಕ್ ಸಮಗ್ರ ವ್ಯವಸ್ಥೆಯ ಲೆಕ್ಕಪರಿಶೋಧಕರ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.
ಠೇವಣಿ, ಕ್ರೆಡಿಟ್ ವ್ಯವಹಾರ ಅಥವಾ ಟಾಪ್ ಅಪ್‌ಗಳನ್ನು ಯಾವುದೇ ಗ್ರಾಹಕ ಖಾತೆಗಳಿಂದ ಸ್ವೀಕರಿಸುವಂತಿಲ್ಲ. ಜೊತೆಗೆ ಈ ಪ್ರಿಪೇಯ್ಡ್, ವಾಲೆಟ್, ಪಾಸ್ಪೆಟ್ಯಾಗ್, ಎನ್‌ಸಿಎಮ್‌ಸಿ ಕಾರ್ಡ್‌ಗಳನ್ನೂ ನೀಡುವಂತಿಲ್ಲ. ಇದನ್ನು ಹೊರತುಪಡಿಸಿ ಬಡ್ಡಿ ಹಣ, ಮರುಪಾವತಿಯನ್ನು ಯಾವುದೇ ಸಮಯದಲ್ಲಿ ಮಾಡಬಹುದು ಎಂದು ತಿಳಿಸಿದೆ.
ಫೆ.29ರಿಂದ ಗ್ರಾಹಕರಿಗೆ ಮರುಪಾವತಿ ಪ್ರಾರಂಭ
ಸದ್ಯ ಖಾತೆಯಲ್ಲಿರುವ ಹಣವನ್ನು ಗ್ರಾಹಕರಿಗೆ ಬಳಸಲು ಯಾವುದೇ ತೊಂದರೆ ಇಲ್ಲ. ಫೆ.29ರಿಂದ ಗ್ರಾಹಕರಿಗೆ ಮರುಪಾವತಿ ಪ್ರಾರಂಭವಾಗಲಿದೆ. ಮಾರ್ಚ್ 15ರೊಳಗೆ ಪೂರ್ಣಗೊಳಿಸಬೇಕು ಎಂದು ಆರ್‌ಬಿಐ ಹೇಳಿದೆ.
RBI directs Paytm Payments Bank to stop onboarding new customers with immediate effect
RBI also says, “No further deposits or credit transactions or top ups shall be allowed in any customer accounts, prepaid instruments, wallets, FASTags, NCMC cards, etc. after February 29,… pic.twitter.com/3UPT10hZ2G
— ANI (@ANI) January 31, 2024