ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರನದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ರಾಂಚಿಯ ನಿವಾಸದಲ್ಲಿ ಹೇಮಂತ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎರಡನೇ ಬಾರಿ ಜಾರ್ಖಂಡ್ ಸಿಎಂ ಆಗಿದ್ದ ಹೇಮಂತ್ ಭೂ ಹಗರಣ ಸುಳಿಯಲ್ಲಿ ಸಿಲುಕಿದ್ದರು. ಈಗಾಗಲೇ ಅಕ್ರಮಕ್ಕೆ ಸಂಬಂಧಿಸಿ 14 ಮಂದಿಯನ್ನು ಬಂಧಿಸಲಾಗಿದೆ.
ಬೆಳಗ್ಗೆಯಿಂದ ಇಡಿ ಅಧಿಕಾರಿಗಳು ಹೇಮಂತ್ ಸೊರೆನ್ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಬಳಿಕ, ಇಡಿ ಅವರನ್ನು ಬಂಧಿಸಿದೆ. ಈ ಬೆಳವಣಿಗೆ ಬಳಿಕ ಸಿಎಂ ಹೇಮಂತ್ ಸೊರೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೇಮಂತ್ ಅವರ ಪತ್ನಿ ಕಲ್ಪನಾ ಮುಂದಿನ ಸಿಎಂ ಆಗುತ್ತಾರೆ ಎನ್ನಲಾಗಿತ್ತಿ. ಆದರೆ, ನಾಳೆ ನೂತನ ಸಿಎಂ ಆಗಿ ಚಂಪಯಿ ಸೊರೆನ್ ಪದಗ್ರಹಣ ಮಾಡಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಚಂಪಯಿ ಸೊರೆನ್ ಹಾಲಿ ರಸ್ತೆ ಮತ್ತು ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ಖಾತೆ ಸಚಿವರಾಗಿದ್ದಾರೆ.
#WATCH | Minibuses seen leaving the premises of Jharkhand CM Hemant Soren’s residence in Ranchi
A team of ED officials is at the residence of CM Soren for questioning in connection with a money laundering case linked to an alleged land scam. pic.twitter.com/kMntOpOUjz
— ANI (@ANI) January 31, 2024