Monday, December 23, 2024

ರಾಷ್ಟ್ರಪತಿಯವರಿಗೆ ಏಕವಚನ: ಸಿಎಂ ಆಡು ಪದ ಬಳಸಿದ್ದಾರೆ ಅಷ್ಟೇ- ದಿನೇಶ್ ಗುಂಡೂರಾವ್

ಚಾಮರಾಜನಗರ : ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಏಕವಚನದಲ್ಲಿ ಸಿಎಂ ಸಿದ್ದರಾಮಯ್ಯ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಅವರು, ಇದು ಮಾತನಾಡುವ ಬರದಲ್ಲಿ ಆ ರೀತಿ ಆಡು ಪದದಲ್ಲಿ ಹಾಗೆ ಮಾತನಾಡಿದ್ದಾರೆ ಅಷ್ಟೇ. ಬೇರೆ ಕೆಟ್ಟರೀತಿಯಲ್ಲಿ ಅವಹೇಳನ ಮಾಡುವ ಉದ್ದೇಶದಿಂದ ಮಾತನಾಡಿಲ್ಲ. ಚುನಾವಣೆ ಹತ್ತಿರವಿರುವ ಕಾರಣ ಈಗ ದಲಿತ ಅಹಿಂದ ಮತಗಳ ಓಲೈಕೆಗೆ ಬಿಜೆಪಿಯವರು ಮುಂದಾಗುತ್ತಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಏಕವಚನ ಬಳಕೆ: ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯಗೆ HDK ತೀವ್ರ ತರಾಟೆ

ಕೇಂದ್ರ ಬರಗಾಲಕ್ಕೆ ಬಿಡಿಗಾಸು ಕೊಟ್ಟಿಲ್ಲ. ಇದರ ಬಗ್ಗೆ ವಿಜಯೇಂದ್ರ, ಅಶೋಕ್ ಮಾತನಾಡಲ್ಲ ಇವರು ಯಾಕೆ ಈ ವಿಚಾರ ಮಾತನಾಡಲ್ಲ. GST ವಿಚಾರ ಬಗ್ಗೆ ಮಾತನಾಡಲ್ಲ ಬೆಲೆ ಏರಿಕೆ ಬಗ್ಗೆಯೂ ಮಾತನಾಡಲ್ಲ. ರಾಮ ಮಂದಿರ ಎಲ್ಲರೂ ಪ್ರೀತಿಸುತ್ತಾರೆ ಚುನಾವಣೆಗಾಗಿ ಈ ರೀತಿ ಮಾಡಬಾರದು ಅದು ಶ್ರೀರಾಮನಿಗೆ ಚ್ಯುತಿ ತಂದಂತೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES