ನವದೆಹಲಿ: ವಿಶ್ವದ ಗಮನ ಸೆಳೆದಿದ್ದ ಬಾಲ ರಾಮ ಗಣರಾಜ್ಯೋತ್ಸವ ಪರೇಡ್ನಲ್ಲೂ ಎಲ್ಲರ ಗಮನ ಸಳೆದಿದೆ.
ಅಯೋಧ್ಯೆಯ ಬಾಲ ರಾಮನ ಮೂರ್ತಿಯ ಸ್ತಬ್ಧಚಿತ್ರ ಕರ್ತವ್ಯ ಪಥದಲ್ಲಿ ಸೇರಿದ್ದ ಜನರ ಗಮನ ಸೆಳೆದ್ದು, ಕೈಯಲ್ಲಿ ಬಿಲ್ಲು ಬಾಣ ಹಿಡಿದ ಬಾಲಕ ರಾಮ, ಸ್ತಬ್ಧಚಿತ್ರ ನೋಡಲು ಸೇರಿದ್ದ ಜನರನ್ನು ಮಂತ್ರಮುಗ್ಧಗೊಳಿಸಿದ್ದ. ಈ ಮೂಲಕ ಜನ ರಾಮನ ಮೇಲಿರಿಸಿದ ಭಕ್ತಿ ಕರ್ತವ್ಯ ಪಥದಲ್ಲೂ ಅನಾವರಣಗೊಂಡಿದೆ.
ಬಾಲಕ ರಾಮನೊಂದಿಗೆ ಉತ್ತರ ಪ್ರದೇಶದ ಮೆಟ್ರೋ ಕಾಮಗಾರಿ ಕುರಿತಾಗಿಯೂ ಅದೇ ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೇ ಸೇನೆಯ ವಿಮಾನವನ್ನೂ ಸಹ ಇರಿಸಲಾಗಿದೆ. ಸ್ತಬ್ಧಚಿತ್ರದ ಸುತ್ತ ಕಲಾವಿದರ ಆಕರ್ಷಕ ನೃತ್ಯ ಪ್ರದರ್ಶನ ಸಹ ಮನಮೋಹಕವಾಗಿತ್ತು.
ಇದನ್ನೂ ಓದಿ: ಸಿದ್ದರಾಮಯ್ಯ ಇಂಟಲಿಜೆನ್ಸಿ ಫೇಲ್ ಆಗಿದೆ: ಬಿ.ವೈ.ವಿಜಯೇಂದ್ರ
ಇನ್ನೂ ಪರೇಡ್ನಲ್ಲಿ ಸ್ತಬ್ಧಚಿತ್ರ ಸೇರಿದಂತೆ ಚಂದ್ರಯಾನ-3, ಲಡಾಕ್ನಲ್ಲಿ ಭಾರತೀಯ ಸೇನೆ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಬಾಲ್ಯದ ಸ್ತಬ್ಧಚಿತ್ರ, ರಾಜಸ್ಥಾನದ ಮಹಿಳೆಯ ಕಲಾತ್ಮಕ ನೃತ್ಯ, ಛತ್ತೀಸ್ಗಢದ ಬಸ್ತಾರ್ ಮುರಿಯಾ ದರ್ಬಾರ್, ಒಡಿಶಾದ ವಿಕಾಸ್ ಭಾರತದ ಅಡಿ ಮಹಿಳಾ ಸಬಲೀಕರಣದ ಸ್ತಬ್ಧಚಿತ್ರ, ಹರಿಯಾಣದ ಬಾಲಕಿಯರ ಶಿಕ್ಷಣಕ್ಕೆ ಬೆಂಬಲ ಸೂಚಿಸುವ ಸ್ತಬ್ಧಚಿತ್ರ, ಸೇರಿದಂತೆ ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮಥ್ರ್ಯ ಪ್ರದರ್ಶಿಸಲಾಗಿದೆ.