ಯಾದಗಿರಿ : ಬೆಂಕಿಯ ಕೆನ್ನಾಲೆಗೆ ಹೊತ್ತಿಕೊಂಡು ಕಬ್ಬಿನ ಬೆಳೆ ಸುಟ್ಟು ಹೋಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಸೀಮಾಂತರದಲ್ಲಿ ನಡೆದಿದೆ.
ಕಟಾವಿಗೆ ಬಂದ ಬೆಳೆ ಬೆಂಕಿಯ ಅವಘಡದಿಂದ ನಾಶವಾಗಿದೆ. ದೊಡ್ಡನಗೌಡ ಪಾಟೀಲ ಎಂಬವರಿಗೆ ಸೇರಿದ 8 ಎಕರೆ ಕಬ್ಬಿನ ಬೆಳೆ ನಾಶವಾಗಿದೆ. ಜೆಸ್ಕಾಂ ಇಲಾಖೆಯ ನಿರ್ಲಕ್ಷ ಜಮೀನನಲ್ಲಿ ಹಾದು ಹೋದ ವೈರ ತುಂಡಾಗಿ ಈ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಜಮೀನಲ್ಲಿದ್ದ ತೆಂಗು ,ಮಾವು, ಕಬ್ಬಿನ ಬೆಳೆ ಸೇರಿ 20 ಲಕ್ಷ ಬೆಳೆ ನಷ್ಟವಾಗಿದೆ. ಜೆಸ್ಕಾಂ ಇಲಾಖೆ ಸಿಬ್ಬಂದಿಗಳ ವಿರುದ್ದ ರೈತರು ಆಕ್ರೋಶ ಹೊರಹಾಕಿದ್ದಾರೆ.
ಜಮೀನನಲ್ಲಿ ಹಾದು ಹೋದ ವೈರ್ಗಳ ಬಗ್ಗೆ ಹಲವು ಭಾರಿ ಮನವಿ ಸಲ್ಲಿಸಿದ್ರೂ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ. ಈ ಸಂಬಂಧ ಕೆಂಭಾವಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.