ಆಂಧ್ರ ಪ್ರದೇಶದ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷೆಯಾಗಿ ಮಾಜಿ ಸಿಎಂ ವೈ ಎಸ್ ರಾಜಶೇಖರ್ ರೆಡ್ಡಿ ಪುತ್ರಿ ಹಾಗು ಹಾಲಿ ಸಿಎಂ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್ ಶರ್ಮಿಳಾ ರೆಡ್ಡಿಯವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಜೊತೆಗೆ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ವಿಲೀನ ಮಾಡಿದ ವೈ. ಎಸ್. ಶರ್ಮಿಳಾ ರೆಡ್ಡಿ ಅವರನ್ನು ಆಂಧ್ರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಜನವರಿ 4 ರಂದು ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನ ಮಾಡಿದ ಶರ್ಮಿಳಾ ರೆಡ್ಡಿ, ಕೆಲವೇ ದಿನಗಳಲ್ಲಿ ಆಂಧ್ರ ಪ್ರದೇಶ ರಾಜ್ಯದ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ.
ಇದನ್ನೂ ಓದಿ: ಘಾಟಿ ಬ್ರಹ್ಮರಥೋತ್ಸವದಲ್ಲಿ ಭಾರೀ ಅವಘಡ: ಭಕ್ತನ ಮೇಲೆ ಹರಿದ KSRTC ಬಸ್
ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಗಿಡುಗು ರುದ್ರರಾಜು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ಪಕ್ಷ ನೇಮಕ ಮಾಡಿದ್ದು. ಈ ಮೂಲಕ ರಾಜು ಅವರನ್ನು ಸಮಾಧಾನ ಮಾಡುವ ಯತ್ನ ಮಾಡಿದೆ.
ఆంధ్రప్రదేశ్ కాంగ్రెస్ కమిటీ నూతన అధ్యక్షురాలుగా నియమితులైన శ్రీమతి @realyssharmila గారికి హార్దిక శుభాకాంక్షలు. 💐 pic.twitter.com/OuhOKppeks
— INC Andhra Pradesh (@INC_Andhra) January 16, 2024
I thank hon’ble @kharge ji , #SoniaGandhi ji , @RahulGandhi ji , and @kcvenugopalmp ji for trusting me with post of the president of @INC_Andhra Pradesh.
I promise to work faithfully towards rebuilding the party to its past glory in the State of Andhra Pradesh with total… https://t.co/C6K8cQEz1F— YS Sharmila (@realyssharmila) January 16, 2024