Wednesday, December 18, 2024

ಖರ್ಗೆ ಬಂದ್ರೆ ಬಿರುಗಾಳಿ ಬರಬಹುದು ಅಂತ ಜೋಶಿಗೆ ಭಯ : ಸಚಿವ ಶರಣಪ್ರಕಾಶ ಪಾಟೀಲ್

ಕಲಬುರಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲಿಪಶು ಮಾಡಲು I.N.D.I.A ಒಕ್ಕೂಟದ ಅಧ್ಯಕ್ಷ ಮಾಡಿದ್ದಾರೆ ಎನ್ನುವ ಕೇಂದ್ರ ಸಚಿವ ಪ್ರಲ್ಹಾದ್​​​ ಜೋಶಿ ಹೇಳಿಕೆಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಂದ ದೇಶದಲ್ಲಿ ಹೊಸ ಬಿರುಗಾಳಿ ಎದುರಾಗಬಹುದು ಎಂದು ಭಯಭೀತರಾಗಿ ಪ್ರಲ್ಹಾದ್ ಜೋಶಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

I.N.D.I.A ಒಕ್ಕೂಟ ಸಾಮಾನ್ಯ ಸಂಘಟನೆಯಲ್ಲ. ಜನವಿರೋಧಿ ನೀತಿ ವಿರುದ್ದ ರಾಷ್ಟ್ರ ಮಟ್ಟದಲ್ಲಿ ರೂಪಿಸಿರುವ ಒಕ್ಕೂಟ ಇದು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ ಎಂದು ಹೇಳಿದ್ದಾರೆ.

ಬಿಜೆಪಿಯವರಿಗೆ ಹೆದರಿಕೆ ಶುರುವಾಗಿದೆ

ಒಬ್ಬ ಕನ್ನಡಿಗನಾಗಿ ಪ್ರಲ್ಹಾದ್ ಜೋಶಿ ಅವರು ಹೆಮ್ಮೆ ಪಡಬೇಕಿತ್ತು. ರಾಷ್ಟ್ರ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರುತಿಸಿರುವುದಕ್ಕೆ ಹೆಮ್ಮೆ ಪಡಬೇಕಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಒಕ್ಕೂಟದ ಅಧ್ಯಕ್ಷರಾಗಿರುವುದರಿಂದ ಬಿಜೆಪಿಯವರಿಗೆ ಹೆದರಿಕೆ ಶುರುವಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES