ದಕ್ಷಿಣಾಯನದ ಮಾರ್ಗಶಿರ ಮಾಸದ ಬರುವ ಎಳ್ಳು ಅಮಾವಾಸ್ಯೆಯೂ ಆಹಾರ ಸಂಸ್ಕೃತಿಯ ಪ್ರತೀಕವಾಗಿದೆ.ಈ ದಿನದ ಆಚರಣೆ ಹೇಗೆ ವಿಶೇಷತೆಗಳೇನು ನಾವು ಈ ದಿನ ಏನೆಲ್ಲಾ ಮಾಡಬೇಕು ಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಮಾಹಿತಿ ನೀಡಿದ್ದಾರೆ.
ಎಳ್ಳು ಬರುವ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸುತ್ತಾರೆ.ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ರೈತರು ಈ ದಿನವನ್ನು ಆಚರಿಸುತ್ತಾರೆ. ಈ ದಿನ ಕರ್ನಾಟಕದಲ್ಲಿ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಪ್ರದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ.
ಶ್ರೀಸಿದ್ದಲಿಂಗೇ ಎಳ್ಳಮಾವಾಸ್ಯೆಯ ವಿಶೇಷತೆಗಳು :
ಪ್ರಾರಂಭ :10-01-2024 ರಾತ್ರಿ: 08:10
ಮುಕ್ತಾಯ: 11-01-2024 ಸಂಜೆ 05:26ಕ್ಕೆ
ಅಮಾವಾಸ್ಯೆ ನಕ್ಷತ್ರ : ಪೂರ್ವಾಷಾಢ
ನಮ್ಮ ಸನಾತನ ಧರ್ಮ ಧರ್ಮದಲ್ಲಿ ಅಮಾವಾಸ್ಯೆಗೊಂದು ವಿಶೇಷ ಮಹತ್ವವಿದೆ, ಅಮಾವಾಸ್ಯೆಯಲ್ಲಿ ನಾವು ಆಚರಿಸುವ ಪ್ರತಿಯೊಂದು ಪುಣ್ಯಕಾರ್ಯಗಳು ದ್ವಿಗುಣ ಫಲಗಳನ್ನು ನೀಡುತ್ತದೆ. ಆದಿನ ನಾವು ಪಾರ್ವತಿ ಪರಮೇಶ್ವರರ, ಲಕ್ಷ್ಮೀನಾರಾಯಣರ ಆರಾಧನೆಯನ್ನು ಮಾಡುವುದರಿಂದ ಮಹಾಲಕ್ಷ್ಮಿಯ ಕೃಪೆಯುಂಟಾಗುತ್ತದೆ.
ಪಿತೃದೇವತೆಗಳ ಆರಾಧನೆಯನ್ನು 2ಮಾಡುವುದರಿಂದ ಪಿತೃದೇವರ ಕೃಪೆಗೆ ಪಾತ್ರರಾಗುತ್ತೀರ. ಅಮಾವಾಸ್ಯೆಯ ದಿನ ಮಾಡುವ ಪ್ರತಿಯೊಂದು ಶ್ರಾದ್ಧ ಕಾರ್ಯಗಳಿಂದ ಜಾತಕದಲ್ಲಿ ಉಂಟಾಗಿರುವ ಪಿತೃದೋಷಗಳು ಪರಿಹಾರವಾಗುತ್ತದೆ.
ಎಳ್ಳಮಾವಾಸ್ಯೆಯ ದಿನ ನಾವು ಏನನ್ನು ಮಾಡಬೇಕು
- ಪವಿತ್ರ ನದಿಗಳಲ್ಲಿ ಸ್ನಾನ
- ಅಭ್ಯಂಜನ ಸ್ನಾನ
- ಗೋಪೂಜೆ
- ಅನ್ನದಾನಾದಿಗಳು
- ಯಜ್ಞಪೂಜಾದಿಗಳು
- ದಾನ ಧರ್ಮಾದಿಗಳು
- ಪ್ರಾಣಿ ಪಕ್ಷಿಗಳಿಗೆ ಆಹಾರಗಳನ್ನು ನೀಡುವುದು ನೀಡುವುದು
- ಕುಲದೇವರ ಆರಾಧನೆ
- ದೀಪಾರಾಧನೆ
- ಎಳ್ಳು ಪದಾರ್ಥಗಳನ್ನು ದಾನ ಮಾಡುವುದರಿಂದ ಶನಿ ದೇವರ ಅನುಗ್ರಹ ಸಿಗುತ್ತದೆ.
- ಶನಿದೇವರ ಪ್ರಭಾವ ಇರುವವರು ಈ ಮಂತ್ರ ಪಠಿಸಿ ಮಠ)ಶ್ರೀಸಿದ್ಧ ಓಂ ಇಷ್ಟಕಾಮೇಶ್ವರಿಯ್ಯ ನಮ: 1008 ಸಾರಿ ಭಜಿಸಿ
ಏನನ್ನು ಮಾಡಬಾರದು
- ತಾಮಸಿಕ ಆಹಾರಗಳಿಂದ ದೂರವಿರಿ
- ಪರರ ಹಿಂಸೆಯನ್ನು ಮತ್ತು ಪರರ ಮನವನ್ನು ನೋಯಿಸಬೇಡಿ
- ಪ್ರಾಣಿಹಿಂಸೆ ಮಾಡಬೇಡಿ