ಶಿವಮೊಗ್ಗ : ಕಾಂಗ್ರೆಸ್ ಕಾರ್ಯಕರ್ತರು ಮುಗ್ದರು. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕುಟುಕಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರಿಗೆ, ರಾಮ ಭಕ್ತರಿಗೆ ಕಿರುಕುಳ ನೀಡಲು ಹೀಗೆ ಮಾಡಿದ್ದಾರೆ. ಸ್ವಾಭಿಮಾನದ ಭಾರತ ಕಟ್ಟುವ ಕನಸೇ ಕಾಂಗ್ರೆಸ್ಗೆ ಇರಲಿಲ್ಲ. ಸ್ವಾಭಿಮಾನದ ಭಾರತ ಕಟ್ಟುವಲ್ಲಿ 70 ವರ್ಷ ಆಳಿದ ಕಾಂಗ್ರೆಸ್ ವಿಫಲ ಆಯ್ತು ಎಂದು ಛೇಡಿಸಿದರು.
ಕಾಂಗ್ರೆಸ್ನಿಂದ ಪೋಸ್ಟರ್ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಸಂತೋಷ್ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಅಂತ ಬಂದಿದೆ. ಕೋರ್ಟ್ ಬಗ್ಗೆ ಇವರಿಗೆ ಗೌರವ ಇಲ್ಲ. ನನ್ನ ಬಳಿ ಬರಲಿ ನಾನು ತೋರಿಸುತ್ತೇನೆ. ಕೋರ್ಟ್ ಆದೇಶವನ್ನೇ ಮೀರಿ ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಮಾತನಾಡಿದರು ಎಂದು ತಿರುಗೇಟು ನೀಡಿದರು.
ನನ್ನ ಪತ್ನಿ ಹೆಸರಿಗೆ ಆಹ್ವಾನ ಪತ್ರಿಕೆ ಬಂದಿದೆ
ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಬಂದಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿ, ಕೋಟ್ಯಂತರ ಜನ ದೇಣಿಗೆ ಕೊಟ್ಟಿದ್ದಾರೆ. ಇವರಿಬ್ಬರೇ ಏನು ಕೊಟ್ಟಿಲ್ಲ. ಆವಾಗ ಬಿಜೆಪಿಯಲ್ಲಿದ್ದರು ಆಗ ಕೊಟ್ಟರು. ಈಗ ಅಲ್ಲಾ ಭಕ್ತರಾಗಿದ್ದಾರೆ, ಮಸೀದಿ ಕಟ್ಟಲು ಈಗ ದೇಣಿಗೆ ಕೊಡಲಿ. ನನ್ನ ಧರ್ಮ ಪತ್ನಿ ಹೆಸರಿಗೆ ಆಹ್ವಾನ ಪತ್ರಿಕೆ ಬಂದಿದೆ. ಈಗ ಬರಬೇಡಿ. ಜನಸಂದಣಿಯಲ್ಲಿ ಯಾಕೆ ಬರ್ತಿರಾ? ಆರಾಮಾಗಿ ಬಂದು ಹೋಗಿ ಅಂದಿದ್ದಾರೆ ಎಂದು ಹೇಳಿದರು.