Sunday, November 24, 2024

ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ : ಹೆಚ್ಚು ದುಡ್ಡು ಪಡೆದ್ರೆ ಶಿಸ್ತು ಕ್ರಮ ಗ್ಯಾರಂಟಿ!

ಬೆಂಗಳೂರು : ಜನವರಿ 2ರಿಂದ ಮದ್ಯದ ದರ ಹೆಚ್ಚಳ ಆಗುತ್ತೆ ಅಂದುಕೊಂಡಿದ್ದ ಎಣ್ಣೆ ಪ್ರಿಯರಿಗೆ ಸಿದ್ದರಾಮಯ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.

ಈಗಾಗಲೇ ಎಣ್ಣೆ ದರ ಹೆಚ್ಚಳ ಆಗಿರೋದ್ರಿಂದ ಸರ್ಕಾರದ ವಿರುದ್ಧ ಮದ್ಯ ಪ್ರಿಯರು ಕೆಂಡಕಾರುತ್ತಿದ್ದರು. ಜನವರಿ 2ರಿಂದ ಮದ್ಯದ ದರ ಹೆಚ್ಚಳ ಆಗೋ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದ್ರು. ಆದ್ರೀಗ, ಎಣ್ಣೆ ಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಸದ್ಯ ಮದ್ಯದ ದರದಲ್ಲಿ ಯಾವುದೇ ದರ ಏರಿಕೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಮದ್ಯ ದರ ಹೆಚ್ಚಳ ಆಗಿದ್ದು ಗ್ರಾಹಕರು ಮದ್ಯ ಕೊಂಡುಕೊಳ್ಳುವಲ್ಲಿ ಹಿಂದೇಟು ಹಾಕಿದ್ರು. ಮತ್ತೆ ದರ ಹೆಚ್ಚಳ ಆಗೋ ವಿಷಯ ತಿಳಿದು ಮದ್ಯ ಮಾರಾಟಗಾರರು ಶಾಕ್ ಆಗಿದ್ರು. ಈಗಗಾಲೇ ದರ ಹೆಚ್ಚಾಳದಿಂದ ಮದ್ಯ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆ ಆಗಿದೆ. ಮತ್ತೆ ದರ ಹೆಚ್ಚಳವಾದ್ರೆ ಮಾರಾಟಕ್ಕೆ ಒಡೆತ ಬೀಳೋದು ಗ್ಯಾರಂಟಿ ಅಂದಿದ್ರು. ಸದ್ಯ ಇದಕ್ಕೆಲ್ಲ ಅಬಕಾರಿ ಇಲಾಖೆ ಬ್ರೇಕ್ ಹಾಕಿದ್ದು, ಎಣ್ಣೆ ಪ್ರಿಯರು ಹಾಗೂ ಮಾರಾಟಗಾರರು ಕೊಂಚ ನಿರಾಳರಾಗಿದ್ದಾರೆ.

ದರ ಹೆಚ್ಚಳ ಕಂಡುಬಂದಲ್ಲಿ ಶಿಸ್ತು ಕ್ರಮ

ಏಪ್ರಿಲ್ ತಿಂಗಳಲ್ಲಿ ಮದ್ಯ ದರ ಹೆಚ್ಚಳ ಬಿಟ್ಟರೆ ಜನವರಿ ಇಂದ ಯಾವುದೇ ಮದ್ಯ ದರ ಹೆಚ್ಚಳ ಇಲ್ಲ. ಮದ್ಯ ಮಾರಾಟ ಕಂಪನಿಗಳು ದರ ಹೆಚ್ಚಳ ಮಾಡಿದಲ್ಲಿ ಮೊದಲು ಅಬಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಪ್ರಸ್ತಾವನೆಯನ್ನು ಇಲಾಖೆ ಸರ್ಕಾರದ ಮುಂದೆ ಪ್ರಸ್ತಾಪ ಮಾಡಲಾಗುತ್ತೆ. ನಂತರವೇ ಮದ್ಯ ದರ ಹೆಚ್ಚಳ ಮಾಡಲಾಗುತ್ತೆ. ಮದ್ಯ ಮಾರಾಟ ಕಂಪನಿಗಳು ವ್ಯಯಕ್ತಿಕವಾಗಿ ದರ ಹೆಚ್ಚಳ ಮಾಡುವ ಆಗಿಲ್ಲ. ಸದ್ಯಕ್ಕೆ ಯಾವುದೇ ದರ ಹೆಚ್ಚಳದ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಆಗಿಲ್ಲ. ಒಂದು ವೇಳೆ ಮದ್ಯ ಮಾರಾಟ ಅಂಗಡಿಗಳಲ್ಲಿ ದರ ಹೆಚ್ಚಳ ಮಾಡಿರುವುದು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದಿಂದ ಮದ್ಯದ ದರ ಏರಿಕೆ ಮಾಡಿಲ್ಲ

ಇನ್ನೂ ಈ ಬಗ್ಗೆ ಅಬಕಾರಿ ಇಲಾಖೆ ಸಚಿವ ಆರ್.ಬಿ ತಿಮ್ಮಾಪುರ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ಮದ್ಯದ ದರ ಏರಿಕೆ ಮಾಡಿಲ್ಲ. ದರ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆ ಆಗಿಲ್ಲ. ಅಬಕಾರಿ ಶುಲ್ಕ ಹೆಚ್ಚಳ ಮಾಡೋದಾದರೆ ಮೊದಲೇ ಹೇಳುತ್ತೇವೆ. ಬಜೆಟ್​​ನಲ್ಲೂ ಸದ್ಯ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿಲ್ಲ ಹೇಳಿದ್ದಾರೆ.

ಒಟ್ನಲ್ಲಿ, ಅಬಕಾರಿ ಇಲಾಖೆಯ ಈ ಉತ್ತರದಿಂದ ಮದ್ಯ ಪ್ರಿಯರು ಹಾಗೂ ಮದ್ಯ ಮಾರಾಟಗಾರರು ನಿರಾಳರಾಗಿದ್ದಾರೆ.

RELATED ARTICLES

Related Articles

TRENDING ARTICLES