ಬೆಂಗಳೂರು: 2023 ಅಕ್ಟೋಬರ್ 30ರಂದು ಆಕ್ಸಿಡೆಂಟ್ನಲ್ಲಿ ಮೃತಪಟ್ಟಿದ್ದ ಬಿಎಂಟಿಸಿ ಡ್ರೈವರ್ ಮಲ್ಲಿಕಾರ್ಜುನ ಅವರ ಹೆಂಡತಿ ರುದ್ರಮ್ಮನಿಗೆ ಇದೇ ಮೊದಲ ಬಾರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಐವತ್ತು ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.
ಇದುವರೆಗೆ ಕೆಎಸ್ಆರ್ಟಿಸಿಯಲ್ಲಿ ಕಂಡಕ್ಟರ್ ಡ್ರೈವರ್ ಹಾಗೂ ನೌಕರರು ಮೃತಪಟ್ಟರೇ ಮಾತ್ರ ಒಂದು ಕೋಟಿ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ತನ್ನ ಸಂಸ್ಥೆಯ ನೌಕರರು ಮೃತಪಟ್ಟರೂ ಐವತ್ತು ಲಕ್ಷ ರೂಪಾಯಿ ನೀಡಲು ಮುಂದಾಗಿದೆ.
ಇದನ್ನೂ ಓದಿ: ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ ವಿಧಿಸಿದ ಕೋರ್ಟ್!: ತಪ್ಪಿದರೇ ಜೈಲು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಯೂನಿಯನ್ ಬ್ಯಾಂಕ್‌ನೊಂದಿಗೆ 2023 ಆಗಸ್ಟ್ 21ರಂದು ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಒಡಂಬಡಿಕೆಯನ್ವಯ ಯೂನಿಯನ್ ಬ್ಯಾಂಕ್ ನಲ್ಲಿ Union Super Sallary Account ಖಾತೆ ಹೊಂದಿದ ಸಿಬ್ಬಂದಿ ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ಮರಣ ಹೊಂದಿದ್ದರಿಂದ ಹಲವು ಸೌಲಭ್ಯಗಳನ್ನು ನೀಡಲಿದೆ.