Friday, November 22, 2024

ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ : ಈ 26 ಆಟಗಾರರಿಗೆ ಅರ್ಜುನ್ ಪ್ರಶಸ್ತಿ

ಬೆಂಗಳೂರು : ಭಾರತದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿಯನ್ನು ಘೋಷಿಸಿದೆ.

ಪ್ರಸಕ್ತ ವರ್ಷದಲ್ಲಿ (2023ರಲ್ಲಿ) ತಮ್ಮ ಸಂವೇದನಾಶೀಲ ಪ್ರದರ್ಶನಕ್ಕಾಗಿ ಮೊಹಮ್ಮದ್ ಶಮಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಶೀಘ್ರದಲ್ಲೇ (ಜನವರಿ 9) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಟೀಂ ಇಂಡಿಯಾ ಅನುಭವಿ ಬೌಲರ್ ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ (ICC ODI) ವಿಶ್ವಕಪ್-2023ರಲ್ಲಿ ಕೇವಲ ಏಳು ಇನ್ನಿಂಗ್ಸ್‌ಗಳಲ್ಲಿ 24 ವಿಕೆಟ್‌ಗಳೊಂದಿಗೆ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. ಈ ಸಾಧನೆ ಮಾಡಿದ ಏಕೈಕ ಬೌಲರ್ ಎನಿಸಿಕೊಂಡಿದ್ದರು.

ಇವರಲ್ಲದೆ ವಿವಿಧ ಆಟಗಳಲ್ಲಿ ಉತ್ತಮ ಪ್ರದರ್ಶನ ತೋರಿದ 26 ಮಂದಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. 2023ರಲ್ಲಿ ಪ್ರಶಸ್ತಿ ಸ್ವೀಕರಿಸಲಿರುವ 26 ಕ್ರೀಡಾಪಟುಗಳ ಪೈಕಿ ಮೊಹಮ್ಮದ್ ಶಮಿ ಕೂಡಾ ಪ್ರಮುಖರಾಗಿದ್ದಾರೆ.

ಯಾರಿಗೆಲ್ಲಾ ಅರ್ಜುನ ಪ್ರಶಸ್ತಿ?

ಮೊಹಮ್ಮದ್ ಶಮಿ : ಕ್ರಿಕೆಟ್

ಓಜಸ್ ಪ್ರವೀಣ್ ದೇವತಾಳೆ : ಬಿಲ್ಲುಗಾರಿಕೆ (ಆರ್ಚರಿ)

ಅದಿತಿ ಗೋಪಿಚಂದ್ ಸ್ವಾಮಿ : ಬಿಲ್ಲುಗಾರಿಕೆ (ಆರ್ಚರಿ)

ಶ್ರೀಶಂಕರ್ ಎಂ : ಅಥ್ಲೆಟಿಕ್ಸ್

ಪಾರುಲ್ ಚೌಧರಿ : ಅಥ್ಲೆಟಿಕ್ಸ್

ಮೊಹಮ್ಮದ್ ಹುಸಾಮುದ್ದೀನ್ : ಬಾಕ್ಸಿಂಗ್

ಆರ್ ವೈಶಾಲಿ : ಚೆಸ್

ಅನುಷ್ ಅಗರ್ವಾಲ್ : ಕುದುರೆ ಸವಾರಿ

ದಿವ್ಯಾಕೃತಿ ಸಿಂಗ್ : ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್

ದೀಕ್ಷಾ ದಾಗರ್ : ಗಾಲ್ಫ್

ಕೃಷ್ಣ ಬಹದ್ದೂರ್ ಪಾಠಕ್ : ಹಾಕಿ

ಪುಖ್ರಾಂಬಂ ಸುಶೀಲಾ ಚಾನು : ಹಾಕಿ

ಪವನ್ ಕುಮಾರ್ : ಕಬಡ್ಡಿ

ರಿತು ನೇಗಿ : ಕಬಡ್ಡಿ

ನಸ್ರೀನ್ : ಖೋ-ಖೋ

ಪಿಂಕಿ : ಲಾನ್ ಬಾಲ್ಸ್

ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ : ಶೂಟಿಂಗ್

ಇಶಾ ಸಿಂಗ್ : ಶೂಟಿಂಗ್

ಹರಿಂದರ್ ಪಾಲ್ ಸಿಂಗ್ ಸಂಧು : ಸ್ಕ್ವಾಷ್

ಅಹಿಕಾ ಮುಖರ್ಜಿ : ಟೇಬಲ್ ಟೆನಿಸ್

ಸುನೀಲ್ ಕುಮಾರ್ : ಕುಸ್ತಿ

ಶ್ರೀಮತಿ ಆಂಟಿಮ್ : ಕುಸ್ತಿ

ನವೋರೆಮ್ ರೋಶಿಬಿನಾ ದೇವಿ : ವುಶು

ಶೀತಲ್ ದೇವಿ : ಪ್ಯಾರಾ ಆರ್ಚರಿ

ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ : ಅಂಧರ ಕ್ರಿಕೆಟ್

ಪ್ರಾಚಿ ಯಾದವ್ : ಪ್ಯಾರಾ ಕ್ಯಾನೋಯಿಂಗ್

ಖೇಲ್ ರತ್ನ ಪ್ರಶಸ್ತಿ

ಚಿರಾಗ್ ಶೆಟ್ಟಿ : ಬ್ಯಾಡ್ಮಿಂಟನ್

ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ : ಬ್ಯಾಡ್ಮಿಂಟನ್

RELATED ARTICLES

Related Articles

TRENDING ARTICLES