Monday, December 23, 2024

ಎಣ್ಣೆ ಏಟಲ್ಲಿ ಪತ್ನಿ ಕೆನ್ನೆ ಕಚ್ಚಿ, ಮಾಂಸವನ್ನೇ ಕಿತ್ತೆಸೆದ ಪಾಪಿ ಪತಿ

ಬೆಳ್ತಂಗಡಿ : ಮದ್ಯದ ಮತ್ತಿನಲ್ಲಿ ಕಟುಕ ಪತಿಯೋರ್ವನು ಪತ್ನಿಯ ಕಣ್ಣು ಕೆನ್ನೆಗೆ ಕಚ್ಚಿ ಮಾಂಸವನ್ನೇ ಕಿತ್ತು ಹಾಕಿರುವ ರಾಕ್ಷಿಸಿ ಕೃತ್ಯವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ತಡರಾತ್ರಿ ನಡೆದಿದೆ‌.

ಆರೋಪಿ ಪುತ್ರಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಶಿಶಿಲ ಬಳಿಯ ಕೋಟೆಬಾಗಿಲು ನಿವಾಸಿ ಸುರೇಶ್ ಗೌಡ ಎಂಬಾತನೇ ಈ ರಾಕ್ಷಸಿಕೃತ್ಯ ಎಸಗಿರುವಾತ.

ಪತಿ ಸುರೇಶ್ ಗೌಡ ಮಾಡಿರುವ ಈ ರಾಕ್ಷಸಿಕೃತ್ಯದಿಂದ ಪತ್ನಿಯ ಎಡ ಕಣ್ಣಿಗೆ ಸಂಪೂರ್ಣ ಹಾನಿಯಾಗಿದೆ. ಆಕೆಯ ಕಣ್ಣು ಹಾಗೂ ಕೆನ್ನೆಯ ಭಾಗಕ್ಕೆ ಕಚ್ಚಿ ಮಾಂಸವನ್ನೇ ಹೊರಗೆಡವಿದ್ದಾನೆ ಆರೋಪಿ. ಆ ಬಳಿಕ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪುತ್ರಿಯ ಮೇಲೂ ಹಲ್ಲೆ

ತಂದೆಯ ದಾಳಿಯಿಂದ ತಾಯಿಯನ್ನು ಬಿಡಿಸಲು ಬಂದ ಪುತ್ರಿಯ ತಲೆ ಹಾಗೂ ಕಣ್ಣಿಗೂ ಆರೋಪಿ ಹೊಡೆದಿದ್ದಾನೆ‌. ಆಗ ಆಕೆ ಪ್ರಾಣ ಉಳಿಸಿಕೊಳ್ಳಲು ತಂದೆಯಿಂದ ತಪ್ಪಿಸಿ ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾಳೆ. ನೆರೆಹೊರೆಯವರು ಧಾವಿಸುತ್ತಿದ್ದಂತೆ ಆರೋಪಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ.

ತಾಯಿ, ಪುತ್ರಿ ಆಸ್ಪತ್ರೆಗೆ ದಾಖಲು

ಪತಿಯಿಂದ ಜೀವ ಉಳಿಸಿಕೊಳ್ಳಲು ಓಡಿ ಹೋಗಿರುವ ಪತ್ನಿ ಇಂದು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ‌. ವಿಪರೀತವಾಗಿ ಗಾಯಗೊಂಡ ತಾಯಿ ಹಾಗೂ ಪುತ್ರಿಯನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES