ಜೊಹಾನ್ಸ್‌ಬರ್ಗ್ : ನಾಳೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ ಜೊಹಾನ್ಸ್ಬರ್ಗ್ನ ವಾಂಡರರ್ ಸ್ಟೇಡಿಯಂನಲ್ಲಿ ನಡೆಯಲಿದೆ.
ನಿನ್ನೆ (ಮಂಗಳವಾರ) ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ವಿರೋಚಿತ ಸೋಲು ಕಂಡ ಭಾರತ ಸರಣಿಯ ಮೂರನೇ ಪಂದ್ಯವನ್ನಾಡಲು ಸಿದ್ಧವಾಗಿದೆ. ಹರಿಣಗಳನ್ನು ಸದೆಬಡಿದು ಸರಣಿಯಲ್ಲಿ ಸಮಬಲ ಸಾಧಿಸುವ ಉತ್ಸಾಹದಲ್ಲಿದೆ ಸೂರ್ಯಕುಮಾರ್ ಪಡೆ.
ಜೊಹಾನ್ಸ್‌ಬರ್ಗ್ ಕ್ರೀಡಾಂಗಣ ಭಾರತ ತಂಡದ ನೆಚ್ಚಿನ ತಾಣ. ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಇಲ್ಲಿ ಆಡಿರುವ ಏಕದಿನ, ಟಿ-20 ಮತ್ತು ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ತಮ್ಮ ನೆಚ್ಚಿನ ತಾಣದಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಹಂಬಲದಲ್ಲಿದೆ.
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೀ.), ಜಿತೇಶ್ ಶರ್ಮಾ (ವಿ.ಕೀ.), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್
ದಕ್ಷಿಣ ಆಫ್ರಿಕಾ ತಂಡ
ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್
Maiden international FIFTY 👌
Chat with captain @surya_14kumar 💬
… and that glass-breaking SIX 😉@rinkusingh235 sums up his thoughts post the 2⃣nd #SAvIND T20I 🎥🔽 #TeamIndia pic.twitter.com/Ee8GY7eObW— BCCI (@BCCI) December 13, 2023