Wednesday, December 18, 2024

ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ವ್ಯವಹಾರದಲ್ಲಿ ನಾನು ಪಾಲುದಾರನಲ್ಲ: ಯತ್ನಾಳ್

ಬೆಳಗಾವಿ: ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿರುವ ಮೌಲ್ವಿ ತನ್ವೀರ್ ಹಾಶ್ಮಿ ಕುಟುಂಬದ ಜೊತೆಗೆ ನಾನು ವ್ಯಾವಹಾರಿಕ ಪಾಲುದಾರಿಕೆ ಹೊಂದಿದ್ದೇನೆ ಎಂಬ ಆರೋಪವೇ ಸುಳ್ಳು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, “‌ಮೌಲ್ವಿ ಹಾಶ್ಮಿ ಕುಟುಂಬಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಭಯೋತ್ಪಾದಕ. ಅವರ ವ್ಯವಹಾರದಲ್ಲಿ ನಾನು ಪಾಲುದಾರನಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಮಿಜೋರಂ ನ ನೂತನ ಸಿಎಂ ಲಾಲ್ಡುಹೋಮ ಪ್ರಮಾಣ ವಚನ ಸ್ವೀಕಾರ!

ಎಲ್ಲದರೂ ಬಗ್ಗೆ ತನಿಖೆ ಆಗಲಿ ನಾನು ಮೌಲ್ವಿ ಹಾಶ್ಮಿ ಜೊತೆಗೆ ವ್ಯಾವಹಾರಿಕ ಪಾಲುದಾರಿಕೆ ಹೊಂದಿದ್ದೇನೆ. ಎನ್ನುವವರ ವಿರುದ್ದ ಮಾನನಷ್ಠ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಸಿದರು.

ಪೊಲೀಸ್ ಇಲಾಖೆಯವರು ಮೌಲ್ವಿ ವಿರುದ್ಧ ಗಂಭೀರ ಆರೋಪವಿದೆ, ಅವರ ಮನೆಗೆ ಹೋಗಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಿದ್ದರೂ, ಮುಸ್ಲಿಮರ ಮತಕ್ಕಾಗಿ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದಾರೆ ಎಂದರು.

 

RELATED ARTICLES

Related Articles

TRENDING ARTICLES