ಬೆಂಗಳೂರು : ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟರ್ ಮುಶ್ಫಿಕರ್ ವಿಭಿನ್ನವಾಗಿ ಔಟ್ ಆಗಿದ್ದಾರೆ.
ಮಿರ್ಪುರ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕರ್ ತಾನು ಮಾಡಿದ ತಪ್ಪಿಗೆ ಸಪ್ಪೆ ಮೋರೆ ಹಾಕಿಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದಾರೆ.
ಕಿವೀಸ್ ಬೌಲರ್ ಜೇಮಿಸನ್ ಎಸೆದ 41ನೇ ಓವರ್ನ 4ನೇ ಎಸೆತವನ್ನು ಮುಶ್ಫಿಕರ್ ಡ್ರೈವ್ ಮಾಡಿದರು. ಬಾಲ್ ಸ್ಟಂಪ್ ಹತ್ತಿರವೂ ಇರಲಿಲ್ಲ. ಆದರೆ, ಚೆಂಡು ಸ್ವಿಂಗ್ ಆಗಿ ಸ್ಟಂಪ್ಗೆ ಬೀಳಬಹುದು ಎಂಬ ಆತಂಕದಲ್ಲಿ ಮುಶ್ಫಿಕರ್ ಕೈಯಿಂದ ತಡೆದರು.
ಕೂಡಲೇ ನ್ಯೂಜಿಲೆಂಡ್ ಆಟಗಾರರು ಫೀಲ್ಡ್ ಅಂಪೈರ್ಗೆ ಮನವಿ ಸಲ್ಲಿಸಿದರು. ಈ ಮನವಿಯನ್ನು ಪುರಸ್ಕರಿಸಿದ ತೀರ್ಪುಗಾರರು ಚರ್ಚಿಸಿ ಮರು ಪರಿಶೀಲನೆಗೆ ಮೂರನೇ ಅಂಪೈರ್ಗೆ ಮನವಿ ಸಲ್ಲಿಸಿದರು. ರೀಪ್ಲೆ ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ಮೂಲಕ ಮುಶ್ಫಿಕುರ್ ರಹೀಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ಗೆ ಅಡ್ಡಿಪಡಿಸಿ ಔಟಾದ ಮೊದಲ ಬಾಂಗ್ಲಾದೇಶ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಐಸಿಸಿ ನಿಯಮದ ಪ್ರಕಾರ, ವಿಕೆಟ್ಗೆ (ಸ್ಟಂಪ್ಗೆ) ಬೀಳುವ ಬಾಲ್ ಅನ್ನು ಬ್ಯಾಟರ್ ಕೈಯಿಂದ ರಕ್ಷಣೆ (ತಡೆಯುವಂತಿಲ್ಲ) ಮಾಡುವಂತಿಲ್ಲ. ಬ್ಯಾಟ್ನಿಂದ ರಕ್ಷಣೆ ಮಾಡಬಹುದು.
Mushfiqur Rahim out for obstructing the field.
– He is the first Bangladesh batter to dismiss by this way in cricket history.pic.twitter.com/MfZONDzswk
— Johns. (@CricCrazyJohns) December 6, 2023