ಯಾದಗಿರಿ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ ಪ್ರಕರಣ ಸಂಬಂಧ 8 ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಯಾದಗಿರಿ ನಗರಸಭೆ ಅಧಿಕಾರಿಗಳು ಸರ್ಕಾರಿ ಆಸ್ತಿಯನ್ನ ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದರು. ಯಾದಗಿರಿ ನಗರಸಭೆ 391 ಸರ್ವೆ ನಂಬರ್ನಲ್ಲಿ ಅಕ್ರಮವೆಸಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಕೈ ಜೋಡಿಸಿ ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳು ಕಳ್ಳಾಟವಾಡಿದ್ದರು.
ಇದನ್ನೂ ಓದಿ: ಮೈಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ!
ನಕಲಿ ದಾಖಲೆ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಯಾದಗಿರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತನಿಖೆಗೆ ತಂಡ ರಚನೆ ಮಾಡಿತ್ತು. ಇದೀಗ 8 ಜನ ಅಧಿಕಾರಿಗಳನ್ನ ಅಮಾನತು ಮಾಡಿ ಪೌರಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಪೌರಾಯುಕ್ತ ಶರಣಪ್ಪ, ಕಂದಾಯ ಅಧಿಕಾರಿ ವಿಶ್ವಪ್ರತಾಪ ಅಲೆಕ್ಸಾಂಡರ್, AEE ರಾಕೇಶ್ ರಡ್ಡಿ, ಸಿಬ್ಬಂದಿಗಳಾದ ಸುರೇಶ ವಿಭೂತೆ, ಪದ್ಮಾವತಿ, ರಿಯಾಜುದ್ದೀನ್, ಲಿಂಗಾರಡ್ಡಿ ಹಾಗೂ ಪುಷ್ಪಾವತಿ ಅಮಾನತಾದ ಅಧಿಕಾರಿಗಳು.