ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸರ್ಕಾರ ವಾಪಸ್ ಪಡೆದಿರುವ ವಿಚಾರಕ್ಕೆ ಸಂವಂಧಿಸಿದಂತೆ ದರೋಡೆಕೋರರನ್ನು ರಕ್ಷಣೆ ಮಾಡಲು ಈ ಸರ್ಕಾರ ಇದೆ ಎಂದು ಜೆ.ಡಿಎಸ್ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು,ಡಿಕೆ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ವಿಚಾರವಾಗಿ ಕೋರ್ಟ್ ನಲ್ಲಿ ಏನು ಆಗುತ್ತೆಂದು ನೋಡಿ ಮಾತಾಡುತ್ತೇನೆ. ಮಾರ್ಯದೆ ಇಲ್ಲದವರಿಗೆ ಕೊರ್ಟ್ ಇದ್ದರೇನು, ಎಲ್ಲಿದ್ದರೇನು? ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಳ್ಳುತ್ತೇವೆ ಅನ್ನೋ ದುರಹಂಕಾರ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪರೋಕ್ಷವಾಗಿ ಕಡಿಕಾರಿದ್ದಾರೆ.
ನಾಳೆ ಅಥವಾ ಶನಿವಾರ ಆದೇಶ
ಹಿಂದಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಹಿಂದಿನ ಅಡ್ವೋಕೇಟ್ ಜನರಲ್ ಹಾಗೂ ನಮ್ಮ ಸರ್ಕಾರದ ಎಜಿ ಇಬ್ಬರ ಅಭಿಪ್ರಾಯ ಗಂಭೀರವಾಗಿ ಪರಿಗಣಿಸಲಾಗಿದೆ. ಸ್ಪೀಕರ್ ರಿಂದ ಪರವಾನಗಿ ಪಡೆದುಕೊಳ್ಳದೇ ನಿಯಮ ಬಾಹಿರವಾಗಿ ಅನುಮತಿಯಿಲ್ಲದೇ ತೆಗೆದುಕೊಂಡ ಕ್ರಮ ಆಗಿತ್ತು. ಕಾನೂನು ಪ್ರಕಾರ ಆಗ ಕ್ರಮ ಆಗಿರಲಿಲ್ಲ. ಹಳೆಯ ಎಜಿ ಈಗಿನ ಎಜಿ ಇಬ್ಬರ ಅಭಿಪ್ರಾಯ ಪರಗಣಿಸಿದ್ದೇವೆ. ಆದೇಶ ನಾಳೆಯೋ ನಾಡಿದ್ದೋ ನಿಮಗೆ ಸೇರುತ್ತದೆ. Its not in accordance with Law ಅಂತ ನಿರ್ಣಯಿಸಿದ್ದೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.