ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಮಂಗಳವಾರ ಬೆಳಗ್ಗೆ 8 ಗಂಟೆಯ ವೇಳೆಯಲ್ಲಿ ದೆಹಲಿಯನ್ನು ದಟ್ಟ ಹೊಗೆ ಆವರಿಸಿತ್ತು.
ನೂರು ಮೀಟರ್ ದೂರದವರೆಗೂ ದೃಷ್ಟಿಗೋಚರವಿರಲಿಲ್ಲ. ನಸುಕಿನಲ್ಲೂ 350 ರಿಂದ 400 ರವರೆಗೆ ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲಾಗಿದೆ. ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಒಟ್ಟಾರೆ ದೆಹಲಿಯ ಏರ್ ಇಂಡೆಕ್ಸ್ ಕ್ವಾಲಿಟಿ 398 ರಷ್ಟು ದಾಖಲಾಗಿದ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ನಿನ್ನೆ ಸಂಜೆ 4 ಗಂಟೆಯ ವೇಳೆಯಲ್ಲಿ 348 ರಷ್ಟು ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲಾಗಿತ್ತು. ಇಂದು ದೆಹಲಿಯ ಕೆಲವು ಬಡಾವಣೆಗಳಲ್ಲಿ 350ಕ್ಕಿಂತ ಹೆಚ್ಚು ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲಾಗಿದ್ದರೆ, ಇನ್ನು ಕೆಲವು ಬಡಾವಣೆಗಳಲ್ಲ ಸ್ವಲ್ಪ ಕಡಿಮೆ ದಾಖಲಾಗಿದೆ.
ದೆಹಲಿಯ ಕೆಲವು ಬಡಾವಣೆಗಳ AQI ಪ್ರಮಾಣ
ಆನಂದ ವಿಹಾರ- 375,ಅಶೋಕ್ ವಿಹಾರ- 361,ದ್ವಾರಕಾ ಸೆಕ್ಟರ್ 8- 389,ಐಜಿಐ ಟಿ 3- 353,ಐಟಿಓ- 320, ಜಹಾಂಗೀರಪುರಿ- 399, ದೆಹಲಿ ವಿವಿ ಉತ್ತರ ಕ್ಯಾಂಪಸ್- 347, ನಜಾಫ್ ಘರ್- 342, ಪಂಜಾಬ್ ಭಾಗ್- 413, ಆರ್.ಕೆ. ಪುರಂ- 372, ರೋಹಿಣಿ- 395, ಶಾದಿಪುರ- 345, ವಿವೇಕ್ ವಿಹಾರ- 354, ವಾಜಿರ್ ಪುರ- 396
#WATCH | Air quality across Delhi continues to be in the ‘very poor’ category as per the Central Pollution Control Board (CPCB).
(Visuals from Nehru Park, shot at 6:30 am) pic.twitter.com/c6pRgSPtl1
— ANI (@ANI) November 21, 2023