ಬೆಂಗಳೂರು: ಟಿವಿಯ ಪ್ರಸಾರವಾದ ದಿನವನ್ನು ಸಂಭ್ರಮಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 21ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ.
ಟಿವಿ ಎಂದು ಮನೆಮನೆಯ ಈ ಸ್ನೇಹಿತನನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷ ಪ್ರಪಂಚದಾದ್ಯಂತ ವಿಶ್ವ ದೂರದರ್ಶನ ದಿನ ಅಥವಾ ವರ್ಲ್ಡ್ ಟೆಲಿವಿಷನ್ ಡೇ ಆಚರಿಸಲಾಗುತ್ತದೆ. ಹಾಗಾದರೆ ಈ ದಿನದ ಆಚರಣೆಯ ಹಿಂದಿನ ಉದ್ದೇಶವೇನು ತಿಳಿಯಿರಿ.
ಟಿವಿ ಮನೆಗಳಿಗೆ ಲಗ್ಗೆಯಿಟ್ಟಾಗ ಡೂಮ್ ಟಿವಿಗಳವು ಇದವು ನಂತರ ಕಾಲ ಕಳೆದಂತೆ ಎಲ್‌ಇಡಿ, ಎಲ್‌ಸಿಡಿ ಸ್ಮಾರ್ಟ್ ಟಿವಿಗಳ ಹವಾ ಶುರುವಾತ್ತು. ಡೂಮ್ ಟಿವಿಗೆ ಡಿಶ್, ಆಂಟೆನಾ ಅಳವಡಿಸಿ ಟಿವಿ ನೋಡುತ್ತಿದ್ದ ದಿನಗಳೇ ಬಲು ಸುಂದರ. ಟಿವಿ ಎಂಬ ಎಲೆಕ್ಟ್ರಾನಿಕ್ ಪರಿಕರವು ಎಲ್ಲ ವಯೋಮಾನದವರಿಗೂ ಮಾಹಿತಿ, ಮನೋರಂಜನೆ ಎಲ್ಲವನ್ನೂ ನೀಡುತ್ತದೆ.
ಪುಟಾಣಿ ಮಕ್ಕಳಿಗೆ ಕಾರ್ಟೂನ್‌ಗಳು ಮನರಂಜಿಸುವ ಜೊತೆಗೆ ವಿವಿಧ ಕಾರ್ಯಕ್ರಮಗಳು, ನ್ಯೂಸ್, ಧಾರಾವಾಹಿಗಳು, ಸಿನಿಮಾಗಳು ಹೀಗೆ ಮಕ್ಕಳಿಂದ ವಯಸ್ಸಾದವರೆಗೂ ಟಿವಿ ಎಲ್ಲರ ಆಕರ್ಷಣೀಯ ಕೇಂದ್ರಬಿಂದುವಾಗಿರುತ್ತದೆ.ದೂರದರ್ಶನವು ಪ್ರಾರಂಭದ ದಿನಗಳಿಂದಲೂ ಸಾಕಷ್ಟು ಅಭಿವೃದ್ಧಿಗೆ ಹೆಸರಾಗಿದೆ. ಪ್ರಸ್ತುತ ಯುಗದಲ್ಲಿ ಇದು ಇನ್ನಷ್ಟು ಬದಲಾವಣೆ ಕಂಡಿದೆ. ‘
ಇತಿಹಾಸ
1927ರಲ್ಲಿ ಮೊದಲ ಎಲೆಕ್ಟ್ರಿಕ್ ಟೆಲಿವಿಷನ್ ಅನ್ನು ಫಿಲೋ ಟೇಲರ್ ಫಾರ್ನ್ಸ್ವರ್ತ್ ಎಂಬ ಅಮೆರಿಕನ್ ಸಂಶೋಧಕರೊಬ್ಬರು ಕಂಡುಹಿಡಿದರು. 1996ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸ್ಲೆಂಬಿ ನವೆಂಬರ್ 21 ಅನ್ನು ವಿಶ್ವ ದೂರದರ್ಶನ ದಿನ ಎಂದು ಘೋಷಿಸಿತು. ಅಲ್ಲದೆ ಪ್ರತಿ ವರ್ಷ ಈ ದಿನ ಆಚರಿಸಬೇಕು ಎಂದು ಕರೆ ನೀಡಿತು.
1996ರ ನವೆಂಬರ್ 21 ಹಾಗೂ ನವೆಂಬರ್ 22ರಂದು ವಿಶ್ವಸಂಸ್ಥೆಯು ಮೊದಲ ವಿಶ್ವ ದೂರದರ್ಶನ ವೇದಿಕೆಯನ್ನು ಆಯೋಜಿಸಿತು.
ಮಹತ್ವ
ದೂರದರ್ಶನ ಅಥವಾ ಟಿವಿ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದು ಎಲ್ಲಾ ವಯೋಮಾನದವರಿಗೂ ಪ್ರಸ್ತುತವಾಗಿದೆ. ನಮ್ಮ ನೋವು, ಬೇಸರ ಕಳೆಯುವ ಶಕ್ತಿ ಟಿವಿಗಿದೆ. ಎಲ್ಲಾ ವಯಸ್ಸಿನವರಿಗೂ ಮನರಂಜನೆ ನೀಡುವ ಮಾಯಾ ಶಕ್ತಿ ಟಿವಿಯದ್ದು. ವಿಶ್ವ ಟೆಲಿವಿಷನ್ ದಿನದಂದು ಜನರು ದೂರದರ್ಶನದ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಚರ್ಚಿಸುತ್ತಾರೆ. ಟೆಲಿವಿಷನ್ ವೀಕ್ಷಣೆಯ ಪರಿಣಾಮ ಮತ್ತು ಪ್ರಯೋಜನಗಳ ಬಗ್ಗೆ ಪ್ರೇಕ್ಷಕರಿಗೆ ಅರಿವು ಮೂಡಿಸಲಾಗುತ್ತದೆ.