Sunday, May 19, 2024

ನನ್ನ ಮೊದಲ ಆದ್ಯತೆ ‘ಮಂಡ್ಯ ಜಿಲ್ಲೆಯಿಂದಲೇ ಪಕ್ಷ ಸಂಘಟನೆ’ : ಬಿ.ವೈ. ವಿಜಯೇಂದ್ರ ಶಪಥ

ಮಂಡ್ಯ : ನನ್ನ ಮೊದಲ ಆದ್ಯತೆ ‘ಮಂಡ್ಯ ಜಿಲ್ಲೆಯಿಂದಲೇ ಪಕ್ಷ ಸಂಘಟನೆ’. ನನ್ನನ್ನು ಈ ಭಾಗದಿಂದ ಹೆಚ್ಚು ನಾಡಿಗೆ ಪರಿಚಯಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಶಾಸಕರನ್ನು ಗೆಲ್ಲಿಸಲು ಶ್ರಮ ಹಾಕುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ನಾರಾಯಣಗೌಡರು ನಮ್ಮ ಜೊತೆಯಲ್ಲೇ ಇದ್ದಾರೆ. ಎಲ್ಲೂ ಹೋಗಿಲ್ಲ. ನಾನು ಅಧ್ಯಕ್ಷರಾದ ನಂತರ ಬಂದು ಆಶೀರ್ವಾದ ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು.

ಉಪ ಚುನಾವಣೆ ನಂತರ ಜನರತ್ತ ಹೋಗುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ, ನಮ್ಮ ಕ್ಷೇತ್ರಗಳನ್ನ ಕಳೆದುಕೊಂಡಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಶಾಸಕರನ್ನ ಗೆಲ್ಲಿಸಬೇಕು. ಆ ಮೂಲಕ ಪಕ್ಷಕ್ಕೆ ಭದ್ರ ಬುನಾದಿ ಹಾಕಲು ಸಂಕಲ್ಪ ಮಾಡಲಾಗುವುದು ಎಂದು ಹೇಳಿದರು.

ನಿಮ್ಮ ದರ್ಪಕ್ಕೆ ತಕ್ಕ ಉತ್ತರ ಕೊಡ್ತೀವಿ

ಕಲಬುರ್ಗಿಯಲ್ಲಿ ಮಣಿಕಂಠ್ ರಾಠೋಡ್ ಕ್ಷೇತ್ರದ ಶಾಸಕರ ವಿರುದ್ಧ ಲೋಕಾಯುಕ್ತಗೆ ದೂರು ಕೊಟ್ಟಿದ್ದಾರೆ. ಅವರಿಗೆ ಕೊಟ್ಟಿದ್ದ ಗನ್ ಮ್ಯಾನ್ ಹಿಂಪಡೆದಿದ್ದಾರೆ. ನಿಮ್ಮ ಅಧಿಕಾರದ ದರ್ಪಕ್ಕೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿಕೆ ಜನಪ್ರತಿನಿಧಿಗಳೆಲ್ಲ ತಲೆ ತಗ್ಗಿಸುವಂತದ್ದು. ಸ್ಪೀಕರ್ ಹುದ್ದೆಗೆ ಕೋಮು ಬಣ್ಣ ಹಚ್ಚುವ ಕೆಲಸ ಇದು. ಸಂವಿಧಾನ, ಅಂಬೇಡ್ಕರ್ ವಿರೋಧಿ ಹೇಳಿಕೆ. ತತ್​ಕ್ಷಣ ಜಮೀರ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ದುಷ್ಟ, ಭ್ರಷ್ಟ ಸರ್ಕಾರ ತಂದಿದ್ದೇವೆ

ಇಡೀ ರಾಜ್ಯದಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ 28 ಕ್ಷೇತ್ರವನ್ನ ಮೈತ್ರಿ ಒಕ್ಕೂಟದ ಜೊತೆ ಗೆಲ್ತೇವೆ. ಪ್ರಧಾನಿ ಮೋದಿ ಅವರಿಗೆ ಸಂಪೂರ್ಣ ಶಕ್ತಿ ಕೊಡಲು ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡ್ತಿದ್ದೇನೆ. ಐದಾರು ತಿಂಗಳಲ್ಲೇ ಜನ ಪರಿತಪಿಸುತ್ತಿದ್ದಾರೆ. ದುಷ್ಟ, ಭ್ರಷ್ಟ ಸರ್ಕಾರ ತಂದಿದ್ದೇವೆ ಅಂತ. ಕಾಂಗ್ರೆಸ್‌ ಸರ್ಕಾರ, ಸಿಎಂಗೆ ರೈತರ ಬಗ್ಗೆ ತಾತ್ಸರ ಯಾಕೆ ಗೊತ್ತಿಲ್ಲ. ಕೃಷಿ ಸನ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ರೈತ ವಿದ್ಯಾ ನಿಧಿ ಬಂದ್ ಮಾಡಿದ್ದಾರೆ. ಕಬ್ಬಿಗೆ ಹೆಚ್ಚಿನ ದರಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಮನವಿ ಕೊಡಲು ಬಂದ ರೈತರನ್ನ ಸಿಎಂ ಅರೆಸ್ಟ್ ಮಾಡಿಸಿದ್ದಾರೆ ಎಂದು ಗುಡುಗಿದರು.

RELATED ARTICLES

Related Articles

TRENDING ARTICLES