ಮಂಡ್ಯ: ಮೈಸೂರಿನ ಕಾರುಣ್ಯ ಮನೆ ಟ್ರಸ್ಟ್‌ನ ಮೂವರು ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಆಟವಾಡುವಾಗ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬ್ಯಾಕ್ ವಾಟರ್‌ನಲ್ಲಿ ಆಟವಾಡುವಾಗ ಮೂವರು ಮುಳುಗಿದ್ದಾರೆ.
ಘಟನೆ ಸಂಭವಿಸಿದ್ದು ಹೇಗೆ..?
ಇಂದು ರಜಾದಿನವಾದ್ದರಿಂದ ಟ್ರಸ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಒಂದು ದಿನದ ಪ್ರವಾಸಕ್ಕೆಂದು ಕಾವೇರಿ ಬ್ಯಾಕ್ ವಾಟರ್ ಬಳಿಗೆ ಬಂದಿದ್ದರು. ಆದರೆ, ನೀರಿನಲ್ಲಿ ಆಟವಾಡುವ ವೇಳೆ ಈಜು ಬಾರದಿದ್ದರೂ ಆಳದ ಪ್ರದೇಶಕ್ಕೆ ಒಬ್ಬರು ಹೋಗಿದ್ದಾರೆ. ಇವರನ್ನು ಕಾಪಾಡಲು ಮುಂದಾದ ಮತ್ತಿಬ್ಬರು ನೀರಿನಾಳಕ್ಕೆ ಹೋಗಿದ್ದು, ಮೂವರೂ ಮುಳುಗಿ ಸಾವಿಗೀಡಾಗಿದ್ದಾರೆ.
ಮೃತರನ್ನು ಹರೀಶ್ (32), ಜ್ಯೋತಿ(18) ಹಾಗೂ ನಂಜುಂಡ (19) ಎಂದು ಗುರುತಿಸಲಾಗಿದೆ. ಜ್ಯೋತಿ ಮತ್ತು ನಂಜುಂಡ ಕಾರುಣ್ಯ ಮನೆ ಟ್ರಸ್ಟ್‌ನಲ್ಲಿ ಆಶ್ರಯ ಪಡೆದಿದ್ದರು. ಹರೀಶ್ ಎನ್ನುವವರು ಟ್ರಸ್ಟ್‌ನ ಸಿಬ್ಬಂದಿಯಾಗಿದ್ದರು. ದುರಾದೃಷ್ಟವಶಾತ್ ಕಾವೇರಿ ಹಿನ್ನೀರಿನಲ್ಲಿ ಆಟವಾಡುವಾಗ ಮೂವರು ಮುಳುಗಿದ್ದಾರೆ.
ಇದನ್ನೂ ಓದಿ: ಸಾಬ್ರು ಅಂತ ತಲೆಬಾಗುತ್ತಾರೆ ಎನ್ನುವುದು ಜಮೀರ್ ಉದ್ಧಟತನ : ಎಂ.ಪಿ ರೇಣುಕಾಚಾರ್ಯ
ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ಮೃತದೇಹ ಮೇಲೆತ್ತುವ ಕಾರ್ಯ ಮಾಡುತ್ತಿದ್ದಾರೆ. ಮೂವರ ಪೈಕಿ ಇಬ್ಬರು ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬನ ಮೃದದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಮೃತ ಜ್ಯೋತಿ, ನಂಜುಂಡ ಮೃತದೇಹ ಪತ್ತೆಯಾಗಿದ್ದು, ಇಬ್ಬರ ಮೃತದೇಹ ಪತ್ತೆ ಮತ್ತೊಬ್ಬನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ಇನ್ನು ಪತ್ತೆಯಾದ ಮೃತದೇಹಗಳು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹರೀಶ್ ಮೃತದೇಹಕ್ಕಾಗಿ ಅಗ್ನಿ ಶಾಮಕ ದಳದಿಂದ ಶೋಧ ಮಾಡುತ್ತಿದೆ. ಸತತ ಎರಡು ಗಂಟೆಯಿಂದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಕೆಆರ್‌ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.