Tuesday, December 3, 2024

ಕಾಂಗ್ರೆಸ್ ರೈತರಿಗೆ ಒಂದಾದರೂ ಗ್ಯಾರಂಟಿ ನೀಡಿದ್ಯಾ? : ಬಂಡೆಪ್ಪ ಖಾಶೆಂಪೂರ ಕಿಡಿ

ಬೀದರ್‌ : ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳ ವಿರುದ್ದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಕಿಡಿಕಾರಿದ್ದಾರೆ.

ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನವರು ರೈತರಿಗೆ ಒಂದಾದರೂ ಗ್ಯಾರಂಟಿ ನೀಡಿದ್ದಾರಾ? ರೈತರಿಗೆ ಅಟ್ಯಾಚ್ ಆಗುವಂತ ಒಂದೂ ಗ್ಯಾರಂಟಿ ನೀಡಿಲ್ಲ ಎಂದು ಕುಟುಕಿದ್ದಾರೆ.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಇದ್ದಾಗ ರೈತರ ಸಾಲ‌ ಮನ್ನಾ ಮಾಡಿದ್ರು. ಆದರೆ, ಈಗ ಕಾಂಗ್ರೆಸ್‌‌ನವರು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ರೈತರು ಈ ದೇಶದ ಜೀವನಾಡಿಯಾಗಿದ್ದು, ಅವರು ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ಅವರ ಬಗ್ಗೆ ಕಿಂಚಿತ್ತು ಕಾಳಜಿ ಮಾಡುತ್ತಿಲ್ಲ. ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು, ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸ್ಪೀಕರ್ ಖುರ್ಚಿಗೆ ಸನ್ಮಾನ ಸಿಗುತ್ತೆ ಆದ್ರೆ..

ಇದೇ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಬಿಜೆಪಿಯರವು ನಮಸ್ಕರಿಸುತ್ತಾರೆ ಎಂದಿರುವ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಜಮೀರ್ ಅಹ್ಮದ್ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬೆಲೆ ಕಟ್ಟಲಾಗದಂತ ಸ್ಥಾನಗಳು ಇವು. ಇಂಥ ಸ್ಥಾನಕ್ಕೆ ಧರ್ಮ, ಜಾತಿ ತರೋದು ಸರಿಯಲ್ಲ‌. ಇದು ಜಮೀರ್ ಅಹ್ಮದ್‌ಗೆ ಶೋಭೆ ತರಲ್ಲ. ಈ ರೀತಿ ಮಾತನಾಡೋದು ತಪ್ಪು. ಸ್ಪೀಕರ್ ಖುರ್ಚಿಗೆ ಸನ್ಮಾನ ಸಿಗುತ್ತೆ ವಿನಃ ಬೇರೆಯದ್ದಕ್ಕಲ್ಲ ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES