Tuesday, November 5, 2024

ಗಾಜಾದ ದೊಡ್ಡ ಆಸ್ಪತ್ರೆ ವಶಪಡಿಸಿಕೊಂಡ ಇಸ್ರೇಲಿ ಪಡೆ, ಜೋ ಬೈಡೆನ್ ಸಮರ್ಥನೆ

ಬೆಂಗಳೂರು : ಇಸ್ರೇಲಿ ಪಡೆಗಳು ಗಾಜಾದ ಅತಿ ದೊಡ್ಡ ಆಸ್ಪತ್ರೆ ಅಲ್ ಶಿಫಾವನ್ನು ವಶಕ್ಕೆ ಪಡೆದಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿರುವುದನ್ನು ಸಮರ್ಥಿಸಿದ್ದಾರೆ.

ಅಲ್ ಶಿಫಾ ಆಸ್ಪತ್ರೆ ಹಮಾಸ್ ಉಗ್ರರ ಕೇಂದ್ರ ಕಚೇರಿಯಂತಾಗಿತ್ತು. ಆಸ್ಪತ್ರೆಯ ಕೆಳಭಾಗದಲ್ಲೇ ಸುರಂಗ ಮಾರ್ಗವನ್ನು ನಿರ್ಮಿಸಿಕೊಂಡಿದ್ದ ಹಮಾಸ್ ಉಗ್ರರು, ಅಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು.

ಆಸ್ಪತ್ರೆಯಲ್ಲಿ ಇಸ್ರೇಲಿ ಒತ್ತೆಯಾಳುಗಳನ್ನೂ ಅಲ್ಲಿಯೇ ಬಂಧಿಸಿಡಲಾಗಿತ್ತು. ಅಲ್ ಶಿಫಾ ಆಸ್ಪತ್ರೆಯಲ್ಲಿ ಸುಮಾರು 1,500 ರೋಗಿಗಳಿದ್ದು, ಸಾವಿರಾರು ಮಂದಿ ನಿರಾಶ್ರಿತರೂ ಆಶ್ರಯ ಪಡೆದಿದ್ದರು. ಅವರನ್ನು ಹಮಾಸ್​ ಉಗ್ರರು ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದರು. ಬುಧವಾರ ಇಸ್ರೇಲಿ ಪಡೆಗಳು ಆಸ್ಪತ್ರೆಯ ಒಳಗೆ ನುಗ್ಗಿದ್ದು, ಪ್ರತಿಯೊಂದು ಕೊಠಡಿಯಲ್ಲೂ ಶೋಧ ಕಾರ್ಯ ನಡೆಸಿವೆ. ಹಮಾಸ್ ಉಗ್ರರು ಆಸ್ಪತ್ರೆಯಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹವಿಟ್ಟಿರುವ ದೃಶ್ಯ ಮತ್ತು ಚಿತ್ರಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ.

ಅಮೆರಿಕಾ ಬೆಂಬಲಿಸುತ್ತಲೇ ಇರುತ್ತದೆ

ಯಾವಾಗ ಹಮಾಸ್ ಉಗ್ರರು, ಇಸ್ರೇಲಿ ನಾಗರಿಕರನ್ನು ಹತ್ಯೆ ಮಾಡುವ ಪೂರ್ಣ ಶಕ್ತಿಯನ್ನು ಕಳೆದುಕೊಳ್ಳುತ್ತಾರೋ ಆಗ ಮಾತ್ರ ಇಸ್ರೇಲ್ ಗಾಜಾ ಮೇಲೆ ದಾಳಿ ಮಾಡುವ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುತ್ತದೆ. ಅಲ್ಲಿಯವರೆಗೂ ಇಸ್ರೇಲ್ ಸೇನಾ ಪಡೆಗಳ ಕಾರ್ಯಾಚರಣೆಯನ್ನು ಅಮೆರಿಕಾ ಸಹ ಬೆಂಬಲಿಸುತ್ತಲೇ ಇರುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ನಿಯಮ ಉಲ್ಲಂಘನೆ

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗಾರಿ, ಹಮಾಸ್ ಉಗ್ರರು ಆಸ್ಪತ್ರೆಯನ್ನು ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನಾಗಿ ಬಳಸಿಕೊಂಡು, ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES