Monday, December 23, 2024

ಬೆಂಗಳೂರಿಗೆ ಬಂದಿಳಿದ ‘ಕರುನಾಡ ದತ್ತು ಪುತ್ರ’ : ಅಭಿಮಾನಿಗಳು ಫುಲ್ ಖುಷ್

ಬೆಂಗಳೂರು : ಭಾರತದ ಕ್ಲಾಸ್ ಬ್ಯಾಟರ್, ರನ್ ಮೆಷಿನ್ ಹಾಗೂ ಕರುನಾಡಿನ ದತ್ತು ಪುತ್ರ ವಿರಾಟ್ ಕೊಹ್ಲಿ ಅವರು ನೆದರ್ಲೆಂಡ್ಸ್​ ವಿರುದ್ಧದ ಮುಂದಿನ ವಿಶ್ವಕಪ್ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಕೋಲ್ಕತ್ತಾದಿಂದ ಎಕಾನಮಿ ಕ್ಲಾಸ್ ವಿಮಾನದಲ್ಲಿ ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ತಂಡದ ಇತರೆ ಆಟಗಾರರಿಗಿಂತ ಕೊಹ್ಲಿ ಕರುನಾಡಿಗೆ ಬಂದಿರುವುದು ವಿಶೇಷ. ಇನ್ನೂ, ವಿರಾಟ್ ಕೊಹ್ಲಿಯನ್ನು ನೋಡಲು ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಅಭಿಮಾನಿಗಳು ನೆರೆದಿದ್ದರು.

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡವನ್ನು ವಿರಾಟ್ ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ವಿರಾಟ್​ಗೆ ಬೆಂಗಳೂರಿನಲ್ಲಿ ಇರುವ ಅಭಿಮಾನಿಗಳ ಫಾಲೋಯಿಂಗ್ ಬಗ್ಗೆ ಹೆಚ್ಚೆನೂ ಹೇಳಬೇಕಿಲ್ಲ. ಕರ್ನಾಟಕದಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಕಿಂಗ್ ಕೊಹ್ಲಿ ಖಾತೆಗೆ ಮತ್ತೊಂದು ದಾಖಲೆ : ಕುಮಾರ ಸಂಗಕ್ಕಾರ ದಾಖಲೆ ಉಡೀಸ್

ಭಾನುವಾರ IND vs NED ಪಂದ್ಯ

ನವೆಂಬರ್ 12 ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ. ಇದೀಗ, ಈ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಇತರೆ ಆಟಗಾರರಿಗಿಂತ ಮೊದಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಳಿದ ಆಟಗಾರರು ಇಂದು ಸಂಜೆಯೊಳಗೆ ಬೆಂಗಳೂರು ತಲುಪಲಿದ್ದಾರೆ.

RELATED ARTICLES

Related Articles

TRENDING ARTICLES