Monday, December 23, 2024

ಮೊಬೈಲ್​ ರಾಬರಿ ಕೇಸ್​: ಇಬ್ಬರು ಆರೋಪಿಗಳು ಅರೆಸ್ಟ್​!

ಬೆಂಗಳೂರು: ಮೊಬೈಲ್​ ರಾಬರಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಹಮದ್ ಜಬಿ@ಕಾಲು, ಶೇಖ್ ಜುನೈದ್ ಬಂಧಿತ ಆರೋಪಿಗಳು, ಬಂಧಿತರಿಂದ 5.50 ಲಕ್ಷ ಮೌಲ್ಯದ 9 ಮೊಬೈಲ್, ಲ್ಯಾಪ್ ಟ್ಯಾಪ್ ,ಸ್ಮಾರ್ಟ್ ವಾಚ್ ಕೃತ್ಯಕ್ಕೆ ಬಳಸಿದ್ದ 3 ಬೈಕ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಗಾಂಜಾ ರಿಕವರಿಗೆ ತೆರಳಿದ್ದ ಕರ್ನಾಟಕ ಪೊಲೀಸರೇ ಅರೆಸ್ಟ್​!

ಐಶಾರಾಮಿ ಜೀವನ ನಡೆಸುವ ಸಲುವಾಗಿ ಈ ಆರೋಪಿಗಳು ಕಳ್ಳತನ ಕೃತ್ಯವನ್ನು ಎಸಗುತ್ತಿದ್ದರು, ಈ ಹಿಂದೆ ಕೊಲೆ ಪ್ರಕರಣದಲ್ಲೂ ಆರೋಪಿ ಮೊಹಮ್ಮದ್​ ಜಬಿ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದ. ಅಷ್ಟೆ ಅಲ್ಲದೇ ಇವರ ವಿರುದ್ದ ನಗರದ ಕೋರಮಂಗಲ, ರಾಮಮೂರ್ತಿ ನಗರ, ಹಲಸೂರು ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನು್​ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

RELATED ARTICLES

Related Articles

TRENDING ARTICLES