ನವದೆಹಲಿ: ನೇಪಾಳದಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪನಕ್ಕೆ 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಿಕ್ಟಾರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ.
ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಪ್ರಕಾರ ಭೂಕಂಪ ಉತ್ತರ ಭಾರತದಲ್ಲಿಯೂ ಅನುಭವನಕ್ಕೆ ಬಂದಿದ್ದು, ದೆಹಲಿ ಎನ್ ಸಿಆರ್ ಸೇರಿದಂತೆ ಹಲವೆಡೆ ಕಂಪನದ ಅನುಭವವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ : ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ಡೈಲೇಖ್, ಸಾಲ್ಯಾನ್ ಮತ್ತು ರೋಲ್ಪಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಿಂದಲೂ ಗಾಯಗಳು ಮತ್ತು ಆಸ್ತಿ ಹಾನಿಯ ವರದಿಗಳು ಬರುತ್ತಿವೆ ಎಂದು ನೇಪಾಳದ ಗೃಹ ಸಚಿವಾಲಯ ತಿಳಿಸಿದೆ. ಗಾಯಗೊಂಡವರಿಗೆ ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ ಸುಮಾರು 500 ಕಿ.ಮಿ ದೂರದಲ್ಲಿರುವ ಜಾಜರ್ಕೋಟ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಜನರು ಬಲವಾದ ಕಂಪನವನ್ನು ಅನುಭವಿಸಿದ ಪರಿಣಾಮ ತಮ್ಮ ಮನೆಗಳಿಂದ ಹೊರಗೆ ಧಾವಿಸಿದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಪ್ರಭಲ ಭೂಕಂಪನ ಸಂಭವಿಸಿದೆ.
Nepal: Death toll jumps to 70 after strong earthquake
Read @ANI Story | https://t.co/e1TCzfvGr9#NepalEarthquake #earthquake #Nepal pic.twitter.com/xY8BEM2zMS
— ANI Digital (@ani_digital) November 4, 2023