ಬೆಂಗಳೂರು : ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದೆ. ಈ ಮೂಲಕ ಲಂಕಾಗೆ 358 ರನ್ಗಳ ಬೃಹತ್ ಗುರಿ ನೀಡಿದೆ.
ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಔಟಾದರು. ಬಳಿಕ, ಶುಭ್ಮನ್ ಗಿಲ್ ಜೊತೆಗೂಡಿದ ಕಿಂಗ್ ಕೊಹ್ಲಿ ಲಂಕಾ ಬೌಲರ್ಗಳನ್ನು ಚಂಡಾಡಿದರು.
ಗಿಲ್ ಹಾಗೂ ಕೊಹ್ಲಿ ಬೊಂಬಾಟ್ ಆಟದ ಮೂಲಕ ಆಕರ್ಷಕ ಅರ್ಧಶತಕ ಪೂರೈಸಿದರು. ಈ ಪಂದ್ಯದಲ್ಲಿ ಬೊಂಬಾಟ್ ಫಾರ್ಮ್ಗೆ ಮರಳಿದ ಗಿಲ್ ಕೇವಲ 8 ರನ್ಗಳಿಂದ ಶತಕದಿಂದ ವಂಚಿತರಾದರು. 92 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿ ನೆರವಿನೊಂದಿಗೆ 92 ರನ್ ಗಳಿಸಿದ್ದಾಗ ಮಧುಶಂಕ ಬೌಲಿಂಗ್ನಲ್ಲಿ ಔಟಾದರು. ಈ ಮೂಲಕ ತಮ್ಮ 7ನೇ ಶತಕದ ಹೊಸ್ತಿಲಲ್ಲಿದ್ದ ಗಿಲ್ ಸ್ವಲ್ಪದರಲ್ಲೇ ಶತಕ ಮಿಸ್ ಮಾಡಿಕೊಂಡರು.
ಕಿಂಗ್ ಕೊಹ್ಲಿ ಇಂದು ಶತಕ ಸಿಡಿಸುತ್ತಾರೆ. ಸಚಿನ್ ಅವರ ಏಕದಿನ ಶತಕದ(49) ದಾಖಲೆಯನ್ನು ಸರಿಗಟ್ಟುತ್ತಾರೆ ಎಂದು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಕೊಹ್ಲಿ ಶತಕದ ಸನಿಹದಲ್ಲಿ ಔಟಾದರು. 94 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನೊಂದಿಗೆ 88 ರನ್ ಗಳಿಸಿದ್ದಾಗ ಮಧುಶಂಕ ಬೌಲಿಂಗ್ನಲ್ಲಿ ಔಟಾದರು. ಈ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದರು.
ಅಯ್ಯರ್ ಸಿಡಿಲಬ್ಬರದ ಆಟ
ಇನ್ನೂ ಗಿಲ್ ಹಾಗೂ ಕೊಹ್ಲಿ ನಿರ್ಗಮನದ ಬಳಿಕ ಕ್ಲಾಸ್ ಪ್ಲೇಯರ್ ಶ್ರೇಯಸ್ ಅಯ್ಯರ್ ಬೊಂಬಾಟ್ ಆಟ ಪ್ರದರ್ಶಿಸಿದರು. 56 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 82 ರನ್ ಗಳಿಸಿದರು. ಅಯ್ಯರ್ ಸಹ ಶತಕ ಸಿಡಿಸುವ ಚಾನ್ಸ್ ಮಿಸ್ ಮಾಡಿಕೊಂಡರು. ಉಳಿದಂತೆ ನಾಯಕ ರೋಹಿತ್ ಶರ್ಮಾ 4, ಕೆ.ಎಲ್ ರಾಹುಲ್ 21, ಸೂರ್ಯಕುಮಾರ್ 12, ಶಮಿ 2, ಬುಮ್ರಾ ಅಜೇಯ 1 ಹಾಗೂ ರವೀಂದ್ರ ಜಡೇಜಾ ಅಜೇಯ 35 ರನ್ ಗಳಿಸಿದರು.
ಭಾರತದ ಬ್ಯಾಟರ್ಗಳಿಗೆ ಸಿಂಹಸ್ವಪ್ನದಂತೆ ಕಾಡಿದ ಶ್ರೀಲಂಕಾ ವೇಗಿ ಮಧುಶಂಕ 5 ವಿಕೆಟ್ ಪಡೆದು ಮಿಂಚಿದರು. ಶ್ರೀಲಂಕಾ ಗೆಲ್ಲಲು 358 ರನ್ ಗಳಿಸಬೇಕಿದೆ.
Innings Break!#TeamIndia set a 🎯 of 3⃣5⃣8⃣ for Sri Lanka!
Over to our bowlers 💪
Scorecard ▶️ https://t.co/rKxnidWn0v#CWC23 | #MenInBlue | #INDvSL pic.twitter.com/80fANgx9wa
— BCCI (@BCCI) November 2, 2023