ಬೆಳಗಾವಿ : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೇ ಡಿ.ಕೆ. ಶಿವಕುಮಾರ್ ಬ್ಲ್ಯಾಕ್ ಮೇಲ್ (ಧಮ್ಕಿ) ಹಾಕಿದ್ದಾನೆ. ಇನ್ನೂ ನನ್ನನ್ನು ಬಿಡುತ್ತಾನೆಯೇ? ಎಂದು ಶಾಸಕ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದರು. ಆಗ ಸೋನಿಯಾ ತಿಹಾರ್ ಜೈಲಿಗೆ ಹೋಗಿ ಡಿಕೆಶಿ ಭೇಟಿಯಾಗಿದ್ರು. ಆಗ ನೀವು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿದ್ದರೆ ಜಾರಿ ನಿರ್ದೇಶನಾಲಯದ ಎದುರು ನಿಮ್ಮ ಹೆಸರನ್ನು ಹೇಳುತ್ತೇನೆ ಎಂದು ಹೆದರಿಸಿ ಅಧ್ಯಕ್ಷ ಪಡೆದಿದ್ದಾನೆ ಎಂದು ಕಿಡಿಕಾರಿದ್ದಾರೆ.
ನಾಲ್ಕು ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ನಾನು ದಾಖಲೆ ಕೊಡದೇ ಇದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ. ಡಿಕೆಶಿ ಅಂತ್ಯವಾದ್ರೆ ರಾಜಕಾರಣದಲ್ಲಿ ಒಳ್ಳೆಯದು. ಸೋನಿಯಾ ಗಾಂಧಿ ಬಗ್ಗೆ ಮಾತನಾಡಿರುವ ಆಡಿಯೋ ಇದೆ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಟ್ರೆ ಅನೇಕ ಪ್ರಕರಣ ಬಯಲಾಗುವುದು. ಸಿಎಂ ಸಿದ್ದರಾಮಯ್ಯಗೆ ಭೇಟಿಯಾಗಿ ಮನವಿ ಮಾಡ್ತಿವಿ. ಇಲ್ಲವೇ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲೇ ಇರೋದು ಟ್ವಿಸ್ಟ್
ಪರಶಿವಮೂರ್ತಿ, ಡಿಕೆಶಿ ಕಾರು ಚಾಲಕನನ್ನು ಯಾಕೆ ವಿಚಾರಣೆಗೆ ಒಳಪಡಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಯಾಕೆ ವಿಚಾರಣೆ ಮಾಡಲಿಲ್ಲ. ಅಲ್ಲೇ ಇರೋದು ಟ್ವಿಸ್ಟ್, ನನ್ನ ಮಾತಿನಿಂದ ಬಿಜೆಪಿಗೆ ಮುಜುಗರ ಆಗೋದು ಬೇಡ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರು ಇದ್ದಾರೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.