ಬೆಂಗಳೂರು : ಜೆಡಿಎಸ್ ಪಕ್ಷದ 19 ಶಾಸಕರಲ್ಲಿ 13 ಮಂದಿ ಶೀಘ್ರದಲ್ಲೇ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಹೇಳುವ ಮೂಲಕ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇಳಿಬರುತ್ತಿರುವ ಆಪರೇಷನ್ ಕಮಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಒಂದು ವೇಳೆ ಆಪರೇಷನ್ ಕಮಲ ಮಾಡಿದರೆ ಕಾಂಗ್ರೆಸ್ ಕೈ ಕಟ್ಟಿ ಕೂರುವುದಿಲ್ಲ. ಅವರು ಆಪರೇಷನ್ ಕಮಲ ಮಾಡಿದರೆ ನಾವು ಕೂಡಾ ಅಪರೇಷನ್ ಹಸ್ತ ಮಾಡುತ್ತೇವೆ ಎಂದು ಹೇಳಿದ ಕೆ.ಎನ್. ರಾಜಣ್ಣ, ನಾವೇನು ಸುಮ್ಮನೆ ಕುತಿದ್ದೇವಾ? ಜೆಡಿಎಸ್ನಿಂದ ಮೂರನೇ ಎರಡರಷ್ಟು ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ. ಲೋಕಸಭೆ ಚುನಾವಣೆಯೊಳಗೇ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಜೊತೆ ಮಾಡಿಕೊಂಡಿರುವ ಮೈತ್ರಿಯಿಂದ ಬೇಸತ್ತು ಅವರು ಕಾಂಗ್ರೆಸ್ ಪಾರ್ಟಿಗೆ ಬರ್ತಾರೆ. ಯಾರು ಯಾರು ಬರ್ತಾರೆ ಅಂತ ಈಗಲೇ ಹೇಳೋದಿಲ್ಲ. ಹೇಳಿದ್ರೆ ಎಚ್ಚೆತ್ತುಕೊಳ್ತಾರೆ. ನೂರಕ್ಕೆ ನೂರು ಬರ್ತಾರೆ ಎಂದ್ರು. ಅವರನ್ನು ನಾವೇನೂ ಬನ್ನಿ ಅಂತ ಕರೆಯುತ್ತಿಲ್ಲ. ಅವರೇ ಬರ್ತೀವಿ ಅಂತಿದ್ದಾರೆ. ಅಲ್ಲಿ ಸೆಕ್ಯೂಲರ್ ಮೈಡ್ ಸೆಟ್ ಇರುವ ಶಾಸಕರುಗಳು ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.