Thursday, December 5, 2024

ಸಾಲಗಾರರಿಗೆ ಬ್ಯಾಂಕ್​ ಅಥವ ಖಾಸಗಿ ಕಂಪೆನಿಗಳು ಸಂಜೆ ಕರೆ ಮಾಡುವಂತಿಲ್ಲ!

ಬೆಂಗಳೂರು: ಸಾಲ ವಸೂಲಿಗಾಗಿ ಬೆಳಗ್ಗೆ 8 ಗಂಟೆ ಮುಂಚೆ ಮತ್ತು ಸಂಜೆ 7ರ ನಂತರ ಸಾಲಾ ವಸೂಲಿ ಮಾಡುವ ಯಾವುದೇ ಕಂಪೆನಿಗಳಾಗಲಿ ಅಥವ ಬ್ಯಾಂಕ್​ಗಳಾಗಲಿ ಕರೆ ಮಾಡುವಂತಿಲ್ಲ ಎನ್ನುವ ಕಾನೂನು ಜಾರಿ ಮಾಡಲು ಭಾರತೀಯ ರಿಸರ್ವ್​ ಬ್ಯಾಂಕ್​ ಚಿಂತನೆ ನಡೆಸಿದೆ.

ಸಾಲ ನೀಡಿದ ಕೆಲವು ಬ್ಯಾಂಕ್​ಗಳು ಹಾಗು ಬ್ಯಾಂಕೇತರ ಖಾಸಗಿ ಕಂಪೆನಿಗಳು ಬ್ಯಾಂಕ್​ ಸಾಲದ ಕಂತುಗಳನ್ನು ಕಟ್ಟದ ಹಿನ್ನೆಲೆ ವಸೂಲಿಗಾಗಿ ಕೆಲವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಂಡು ವಸೂಲಿಗೆ ಮುಂದಾಗಿದೆ.

ಇದನ್ನೂ ಓದಿ: ಹೊಸಕೋಟೆಯಲ್ಲಿ ಬೆಳ್ಳಂ ಬೆಳಗ್ಗೆ JCB ಘರ್ಜನೆ: ಅರಣ್ಯ ಪ್ರದೇಶ ಒತ್ತುವರಿ ತೆರವು

ಈ ಪ್ರಸ್ತಾಪವನ್ನು ರಿಸರ್ವ್​ ಬ್ಯಾಂಕ್​ ಮಂಡಳಿ ಎದುರು ಪ್ರಸ್ತಾಪಿಸಿ ಒಪ್ಪಿಗೆ ಪಡೆದ ಬಳಿಕ ಜಾರಿ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುವುದು, ಮತ್ತು ಸಾಲ ವಸೂಲಿಗಾರರಿಗೆ ಸರಿಯಾದ ತರಬೇತಿ ನಿಡಬೇಕು, ಸಾಲಗಾರ ಮತ್ತು ಅವರ ಕುಟುಂಬಕ್ಕೆ ನಿಂದನೆ ಮಾಡುವ ಕೆಲವನ್ನು ಮಾಡಬಾರದು, ಸಾಲಗಾರರ ಖಾಸಗಿತನಕ್ಕೆ ಧಕ್ಕೆ ತರದಂತೆ ಕ್ರಮ ಕೈಗೊಳ್ಳಬೇಕು ಎಂದು ಆರ್​ ಬಿ ಐ ಹೇಳಿದೆ.

ಇತ್ತೀಚೆಗೆ ಸಾಲಗಾರರಿಗೆ ಸಾಲದ ಕಂತುಗಳನ್ನು ಮರುಪಾವತಿ ಮಾಡುವಂತೆ ಬ್ಯಾಂಕ್ ಹಾಗು ಬ್ಯಾಂಕೇತರ ಖಾಸಗಿ ಕಂಪೆನಿಗಳು ದಿನದಲ್ಲಿ ಯಾವಗ ಅಂದರೇ ಆವಾಗ ಕರೆ ಮಾಡಿ ಮಾನಸಿಕ ಕಿರಿಕಿರಿ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ನೂತನ ಕಾನೂನು ಜಾರಿ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದೆ.

RELATED ARTICLES

Related Articles

TRENDING ARTICLES