ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ 50 ದಿನಗಳ ಹಿಂದೆ ದಸರಾಗಾಗಿ ಮೈಸೂರಿಗೆ ಎಂಟ್ರಿ ಕೊಟ್ಟ ಕ್ಯಾಪ್ಟನ್ ಅಭಿಮನ್ಯು ಟೀಂ ಇದೀಗ ದಸರಾಗೆ ಫಿಟ್ ಆ್ಯಂಡ್ ಫೈನ್ ಆಗಿದೆ.
1960ರಲ್ಲಿ ಕೊಡಗಿನ ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾದ ಅಭಿಮನ್ಯು ಅರಣ್ಯ ಇಲಾಖೆಯ ಕಳಸ ಅಂತಾನೆ ಬಿಂಬಿತವಾಗಿದೆ. ಸುಮಾರು 21 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿರೋ ಅಭಿಮನ್ಯು, 2012 ರಿಂದ 2015 ರವರೆಗೆ ಪೊಲೀಸ್ ಬ್ಯಾಂಡ್ ವಾದ್ಯಗೋಷ್ಠಿ ಗಾಡಿಯನ್ನ ಎಳೆಯುವ ಕೆಲಸ ಮಾಡುತ್ತಿತ್ತು. ಅರ್ಜುನನ ಬಳಿಕ ಅಭಿಮನ್ಯು ಕಳೆದ 3 ವರ್ಷಗಳಿಂದ ಅಂಬಾರಿ ಹೊರುವಲ್ಲಿ ನಿರತವಾಗಿದೆ.
ಸುಮಾರು 150 ಕಾಡಾನೆ ಕಾರ್ಯಾಚರಣೆ, 50 ಹುಲಿ ಕಾರ್ಯಾಚರಣೆಯಲ್ಲಿ ಭಾಗಿಯಾದ ರೆಕಾರ್ಡ್ ಕೂಡ ಅಭಿಮನ್ಯು ಹೆಸರಲ್ಲಿದೆ.. ಈ ಬಾರಿ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿದ್ದಾನೆ. ಇನ್ನು ದಸರಾಗೆ ಬಂದಿರೋ 14 ಆನೆಗಳಲ್ಲಿ ಅಂದಾಜು ಹೊಸ ಆನೆಗಳು ಭಾಗಿಯಾಗೋದು ಡೌಟ್ ಅಂತಾನೂ ಹೇಳಲಾಗ್ತಿದೆ.
ಹಾಲಿ ಕ್ಯಾಪ್ಟನ್ ಅಭಿಮನ್ಯುಗೆ ಮಾಜಿ ಕ್ಯಾಪ್ಟನ್ ಅರ್ಜುನ ಕೂಡ ಸಾಥ್ ನೀಡಲಿದ್ದಾನೆ. ಅಭಿಮನ್ಯುಗೆ ವಿಜಯ, ವರಲಕ್ಷ್ಮಿ ಕುಮ್ಕಿ ಆನೆಗಳಾದ್ರೆ, ನೌಪಥ್ ಆನೆಯಾಗಿ ಧನಂಜಯ ಅಥವಾ ಮಹೇಂದ್ರ ಸೆಲೆಕ್ಟ್ ಆಗಲಿವೆ. ಇನ್ನುಳಿದವು ಸಾಲಾನೆಗಳಾಗಿ ಮೆರವಣಿಗೆಯಲ್ಲಿ ಸಾಗಲಿವೆ. ಒಟ್ಟಿನಲ್ಲಿ 2023ರ ಜಗತ್ಪ್ರಸಿದ್ಧ ದಸರಾಗೆ ಮೈಸೂರು ಸಾಕ್ಷಿಯಾಗಲಿದ್ದು, ದಸರಾದ ಕೇಂದ್ರ ಬಿಂದು ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ.