Wednesday, December 18, 2024

ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ನಟ ಡಾಲಿ ಧನಂಜಯ್!

ಬೆಂಗಳೂರು: ‘ಟಗರು ಪಲ್ಯ’ ಹೆಸರಿನ ಸಿನಿಮಾದ ನಿರ್ಮಾಣವನ್ನು ಡಾಲಿ ಧನಂಜಯ್ ಮಾಡಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಇದರ ನಡುವೆ ಧನಂಜಯ್ ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

ನಟ ಡಾಲಿ ಧನಂಜಯ್ ಇತ್ತೀಚೆಗೆ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದಭಿರುಚಿಯ, ಕಂಟೆಂಟ್ ಆಧರಿತ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಬರುವ ಸಿನಿಮಾಗಳಿಗೆ ಕತೆಗಳನ್ನು ನಿರ್ದಿಷ್ಟ ಮಾನದಂಡಗಳ ಮೂಲಕ ಆಯ್ಕೆ ಮಾಡುವ ಧನಂಜಯ್, ಸಿನಿಮಾದ ಪ್ರಚಾರವನ್ನೂ ಅದ್ದೂರಿಯಾಗಿಯೇ ಮಾಡುತ್ತಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಹೇಳಿಕೆ ಸುಳ್ಳು: ಕೇರಳ ಸಿಎಂ

ಇದೀಗ ‘ಟಗರು ಪಲ್ಯ’ ಹೆಸರಿನ ಸಿನಿಮಾದ ನಿರ್ಮಾಣವನ್ನು ಡಾಲಿ ಧನಂಜಯ್ ಮಾಡಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಇದರ ನಡುವೆ ಧನಂಜಯ್ ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ‘ಟಗರು ಪಲ್ಯ’ ಸಿನಿಮಾದ ನಿರ್ಮಾಪಕ ಡಾಲಿ ಧನಂಜಯ್ ಅವರು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ತಮ್ಮ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ವೀಕ್ಷಣೆಗೆ ಬರಬೇಕೆಂದು ಆಹ್ವಾನ ನೀಡಿದ್ದಾರೆ.

ಡಾಲಿ ಆಹ್ವಾನಕ್ಕೆ ಧನಾತ್ಮಕವಾಗಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ಡಾಲಿ ಧನಂಜಯ್ ಜೊತೆಗೆ ಬಿಜೆಪಿ ನಾಯಕಿ, ನಟಿ ತಾರಾ ಸಹ ಜೊತೆಗಿದ್ದರು.

RELATED ARTICLES

Related Articles

TRENDING ARTICLES