Sunday, November 24, 2024

ನಾನು ಎಲ್ಲೂ ಓಡಿ ಹೋಗಲ್ಲ, ಅವಿತುಕೊಳ್ಳೋದು ಇಲ್ಲ : ಡಿ.ಕೆ ಶಿವಕುಮಾರ್

ಬೆಂಗಳೂರು : ತಮ್ಮ ವಿರುದ್ಧ ಮಧ್ಯಂತರ ತಡೆಯಾಜ್ಞೆ ತೆರವಿಗೆ ಸುಪ್ರೀಂ ಕೋರ್ಟ್ ತೀರ್ಪು ವಿಚಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಲ್ಲೂ ಓಡಿ ಹೋಗಲ್ಲ, ಅವಿತುಕೊಳ್ಳೋದು ಇಲ್ಲ. ಕಾನೂನಿಗೆ ಏನು ಗೌರವ ಕೊಡಬೇಕು ಕೊಡ್ತೀನಿ. ಯಾರ್ಯಾರಿಗೆ ಏನು ಉತ್ತರ ಕೊಡಬೇಕು ಕೊಡ್ತೀನಿ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವೇಣುಗೋಪಾಲ್ ಜೊತೆ ಸಭೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿ, ಪಕ್ಷದ ಆಂತರಿಕ ವಿಚಾರ, ಪಾರ್ಲಿಮೆಂಟ್ ಸೀಟ್ ಬಗ್ಗೆ ಚರ್ಚೆ ಆಯ್ತು. ನಿಗಮ ಮಂಡಳಿ ಮಾಡುವುದಕ್ಕೆ ವೇಗ ಕೊಡುವ ಕುರಿತು ಚರ್ಚೆ ಆಯ್ತು. ಕಾರ್ಯಕರ್ತರು, ಶಾಸಕರು ಎಲ್ಲರಿಗೂ ನಿಗಮ ಮಂಡಳಿ ಕೊಡಬೇಕು. ನಾನು, ಸಿಎಂ ಕೂತು ನಿಗಮ ಮಂಡಳಿ ಬಗ್ಗೆ ಇವತ್ತು ನಾಳೆ ಚರ್ಚೆ ಮಾಡ್ತೇವೆ ಎಂದರು.

ಸಚಿವರಿಂದ ಹಣ ಸಂಗ್ರಹ ಮಾಡಬೇಕು ಅಂತ ಹೈಕಮಾಂಡ್ ಸೂಚನೆ ಎನ್ನುವ ಬಿಜೆಪಿ ಆರೋಪ ವಿಚಾರ ಕುರಿತು ಮಾತನಾಡಿ, ಲೂಟಿಗೂ ತಿಳಿಸ್ತೀನಿ, ನಕಲಿಗೂ ತಿಳಿಸ್ತೀನಿ. ಬ್ಲಾಕ್ ಮೇಲ್​ಗೂ ತಿಳಿಸ್ತೀನಿ, ಪಾರ್ಟಿ ಅಧ್ಯಕ್ಷ, ಮಾಜಿ ಸಿಎಂಗೂ ಉತ್ತರ ಕೊಡ್ತೀನಿ. ಈಗಲ್ಲ ಪಾಪ ಅವರಿಗೆ ಇನ್ಕಂಟ್ಯಾಕ್ಸ್ ಪ್ರೊಸಿಜರ್ ಗೊತ್ತಿಲ್ಲ. ಯಾರೋ ವ್ಯವಹಾರ ಮಾಡ್ತಿದ್ದಾರೆ, ಡೈವರ್ಟ್ ಮಾಡ್ತಿದ್ದಾರೆ ಗೊತ್ತಿಲ್ಲ. ಏಜೆಂಟ್ ತರ ಮತಾಡ್ತಾವರೆ, ಸ್ಪೋಕ್ ಮೆನ್ ತರ ಮಾತನಾಡ್ತಾವ್ರೆ ಎಂದು ಕುಟುಕಿದರು.

ನಕಲಿ ಸ್ವಾಮಿಗಳಿಗೂ ಉತ್ತರ ಕೊಡ್ತೀನಿ

ಕುಮಾರಸ್ವಾಮಿ ಇಂದ ಡಿಕೆಶಿ ಟಾರ್ಗೆಟ್ ವಿಚಾರ ಕುರಿತು ಮಾತನಾಡಿ, ನಾನೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅವರ ತರ ಮತಾಡೋಕೆ ಆಗಲ್ಲ, ತಪ್ಪಾಗುತ್ತೆ ಕೋರ್ಟ್ ಕಾನೂನು ಎಲ್ಲಾ ಬರುತ್ತೆ. ಅದಕ್ಕೆಲ್ಲಾ ಮುಹೂರ್ತ ಫಿಕ್ಸ್ ಮಾಡ್ತೀನಿ. ಇವರ್ಯಾರಿಗೂ ಹೆದರಿ ಓಡೋಗಲ್ಲ, ನಕಲಿ ಸ್ಟೇಟ್ ಮೆಂಟ್, ಬ್ಲಾಕ್ ಮೇಲ್ ಸ್ಟೇಟ್ ಮೆಂಟ್ ಗೆಲ್ಲ ಉತ್ತರ ಕೊಡ್ತೀನಿ. ನಾನು ಹೇಳ್ತಿದ್ದೀನಲ್ಲಾ ಮಾಜಿ ಸಿಎಂ ಅಂತ, ನಕಲಿ ಸ್ವಾಮಿಗಳಿಗೂ ಉತ್ತರ ಕೊಡ್ತೀನಿ. ನಾನೆಲ್ಲೂ ಓಡೋಗಲ್ಲ, ಮುಚ್ಚುಮರೆ ಇಲ್ಲ ರಾಜಕಾರಣ ಮಾಡಬೇಕು ಅಂತ ಬೆಂಗಳೂರಿನಲ್ಲಿ ಇರೋನು ನಾನು ಎಂದು ಹೆಚ್​ಡಿಕೆಗೆ ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES