Saturday, November 23, 2024

ಗಂಡನ ವಿಚಿತ್ರ ಬೇಡಿಕೆ: ಪತ್ನಿ ಠಾಣೆಗೆ ದೂರು !

ಬೆಂಗಳೂರು: ಗಂಡನ ವಿಚಿತ್ರ ಬೇಡಿಕೆ ನಿರಾಕರಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2007ರಲ್ಲಿ ಮಹಿಳೆಗೆ ಮಂಗಳೂರು ಮೂಲದ ಸುಧೀರ್ ಪೈ ಎಂಬಾತನ ಜೊತೆಯಲ್ಲಿ ಮದುವೆಯಾಗಿತ್ತು. ದಂಪತಿಗೆ 11 ಮತ್ತು 10 ವರ್ಷದ ಎರಡು ಮಕ್ಕಳು ಇವೆ. ಪತಿ ಸಣ್ಣಪುಟ್ಟ ವಿಷಯಕ್ಕೂ ಕಿರಿಕಿರಿ ಮಾಡಿ ಹಲ್ಲೆ ನಡೆಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಂದು ಬಾರಿ ಮಕ್ಕಳು ತನ್ನ ಪತಿಯ ಮೊಬೈಲ್ ತೆಗೆದುಕೊಂಡು ಆಟ ಆಡುತ್ತಿದ್ದರು. ಈ ವೇಳೆ ಮಹಿಳೆ ಗಂಡನ ಮೊಬೈಲ್ ಚೆಕ್ ಮಾಡಿದಾಗ ಪತಿಯ ಕರಾಳ ಮುಖ ಬಯಲಾಗಿದೆ. ಗಂಡನ ಫೋನ್ ನೋಡಿದಾಗ ಆತ ತನ್ನ ಗೆಳೆಯರಾದ ನಾರಾಯಣ್ಣ, ಅನಂತ್ ಕಾಮತ್ ಮತ್ತು ಲೇಟ್ ವೀರೇಂದ್ರ ಬಳ್ಳಲ್ ಎಂಬವರೊಂದಿಗೆ ಪತ್ನಿ ಜೊತೆಗಿನ ದೈಹಿಕ ಸಂಪರ್ಕ ನಡೆಸಿರುವ ಬಗ್ಗೆ ಚಾಟ್ ನಡೆಸಿದ್ದಾನೆ.

ಇದನ್ನೂ ಓದಿ: ಅಮೇರಿಕಾ ಈಗ ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇಳುತ್ತಿದೆ: ಇಸ್ರೋ

ಈ ಬಗ್ಗೆ ಮಹಿಳೆ ಗಂಡನನ್ನು ಪ್ರಶ್ನಿಸಿದಾಗ, ಅದು ನನ್ನ ಇಷ್ಟ, ನಾನು ಏನಾದ್ರೂ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಯಾರಿಗಾದ್ರೂ ಹೇಳಿದ್ರೆ ಸಾಯಿಸಿ ಬಿಡುತ್ತೇನೆ ಎಂದು ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅಷ್ಟೆ ಅಲ್ಲದೇ ತನ್ನ ಸ್ನೇಹಿತರೊಂದಿಗೆ ಪತ್ನಿಯು ಹಾಸಿಗೆ ಹಂಚಿಕೊಳ್ಳುವಂತೆ ಒತ್ತಡ ಏರುತ್ತಿರುವುದ್ದಾರೆ. ಈ ಕುರಿತು ಗಂಡನಿಗೆ ಸರಿಯಾಗಿ ತಿಳಿ ಹೇಳಿದರೂ ಅವರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದರಿಂದ ಮಕ್ಕಳನ್ನು ಕರೆದುಕೊಂಡು ನಾನು ತವರು ಮನೆ ಸೇರಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES